ನೀರು ಅಂದುಕೊಂಡು ಸ್ಯಾನಿಟೈಸರ್ ಕುಡಿದ ಮುನ್ಸಿಪಲ್ ಕಾರ್ಪೋರೇಷನ್ ಉಪ ಕಮಿಷನರ್ - Mahanayaka

ನೀರು ಅಂದುಕೊಂಡು ಸ್ಯಾನಿಟೈಸರ್ ಕುಡಿದ ಮುನ್ಸಿಪಲ್ ಕಾರ್ಪೋರೇಷನ್ ಉಪ ಕಮಿಷನರ್

03/02/2021

ಮುಂಬೈ:  ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್(ಬಿಎಂಸಿ) ಉಪ ಕಮಿಷನರ್ ರಮೇಶ್ ಪವಾರ್  ಸಭೆಯಲ್ಲಿ ಬಂದು ಕುಳಿತುಕೊಂಡ ತಕ್ಷಣವೇ ಸ್ಯಾನಿಟೈಸರ್ ಕುಡಿದ ಘಟನೆ ನಡೆದಿದ್ದು, ನೀರು ಎಂದು ಭಾವಿಸಿ ಅವರು ಸ್ಯಾನಿಟೈಸರ್ ಕುಡಿದಿದ್ದಾರೆ.

ಇಂದು ನಾಗರಿಕ ಸಂಸ್ಥೆಯ ಶಿಕ್ಷಣ ಬಜೆಟ್ ಮಂಡನೆಗೆ ಬಂದಿದ್ದ  ಅವರು,  ಸಭೆಗೆ ಬಂದು ಕುಳಿತುಕೊಳ್ಳುತ್ತಿದ್ದಂತೆಯೇ  ಟೇಬಲ್ ಮೇಲೆ ಇರಿಸಲಾಗಿದ್ದ ಸ್ಯಾನಿಟೈಸರ್ ಬಾಟಲಿಗೆ ಕೈ ಹಾಕಿದ್ದಾರೆ. ಸ್ಯಾನಿಟೈಸರ್ ಬಾಟಲಿ ಕೂಡ ನೀರಿನ ಬಾಟಲಿಯಷ್ಟೇ ಗಾತ್ರ ಇದ್ದುದರಿಂದ ಗಮನಿಸದೇ ಅವರು ಕುಡಿದ್ದಾರೆ.

ಸ್ಯಾನಿಟೈಸರ್ ಕುಡಿಯುತ್ತಿದ್ದಂತೆಯೇ ಅದರ ರುಚಿಯಲ್ಲಿ ಬದಲಾವಣೆ ಗಮನಿಸಿದ ಅವರು ತಕ್ಷಣವೇ ನಿಲ್ಲಿಸಿದ್ದಾರೆ. ಈ ವೇಳೆ ಹಿಂದಿನಿಂದ ಯಾರೋ ಅವರಿಗೆ ನೀರಿನ ಬಾಟಲಿ ನೀಡಿದ್ದಾರೆ.  ಈ ಘಟನೆಯಿಂದ ವಿಜಲಿತರಾದ ಅವರು ತಕ್ಷಣವೇ ಸಭಾಂಗಣದಿಂದ ಹೊರ ಹೋಗಿ ಕೆಲ ಕಾಲ ಹೊರ ನಿಂತು ಮತ್ತೆ ಸಭಾಂಗಣಕ್ಕೆ ಬಂದರು.

ನೀರಿನ ಬಾಟಲಿ ಹಾಗೂ  ಸ್ಯಾನಿಟೈಸರ್ ಬಾಟಲಿ ಒಂದೇ ರೀತಿ ಇದ್ದುದರಿಂದಾಗಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ನೀರು ಹಾಗೂ ಸ್ಯಾನಿಟೈಸರ್ ಬಾಟಲಿ ಒಂದೇ ಗಾತ್ರದಲ್ಲಿ ಇತ್ತು. ಇದರಿಂದಾಗಿ ಅವರು ಗೊಂದಲಕ್ಕೊಳಗಾಗಿದ್ದರು. ಈ ಘಟನೆಯ ವಿಡಿಯೋವನ್ನು ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.

https://twitter.com/thakur_shivangi/status/1356894799387758593?s=20

ಇತ್ತೀಚಿನ ಸುದ್ದಿ