ಬೈಕ್ ಗೆ ಡಿಕ್ಕಿ ಹೊಡೆದು ಎಳೆದೊಯ್ದ ಬಿಎಂಟಿಸಿ ಬಸ್: ವಿದ್ಯಾರ್ಥಿನಿ ಸಾವು - Mahanayaka

ಬೈಕ್ ಗೆ ಡಿಕ್ಕಿ ಹೊಡೆದು ಎಳೆದೊಯ್ದ ಬಿಎಂಟಿಸಿ ಬಸ್: ವಿದ್ಯಾರ್ಥಿನಿ ಸಾವು

kusumitha
02/02/2024

ಬೆಂಗಳೂರು:  ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ  ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹರಿಶ್ಚಂದ್ರ ಘಾಟ್ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಕೆಂಗೇರಿಯ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತಿದ್ದ ಮಲ್ಲೇಶ್ವರ ನಿವಾಸಿ ಯುವತಿ ಕುಸುಮಿತಾ (21) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮಲ್ಲೇಶ್ವರಂನಿಂದ ಹರಿಶ್ಚಂದ್ರಘಾಟ್ ಗೆ ಬೈಕ್ ನಲ್ಲಿ ಬರುತಿದ್ದ ಯುವತಿ, ಬಳಿಕ ಮೆಟ್ರೋ ಬಳಸಿ ಕಾಲೇಜಿಗೆ ತೆರಳುತಿದ್ದರು. ಶುಕ್ರವಾರ ಬೆಳಗ್ಗೆ ಮಲ್ಲೇಶ್ವರದಿಂದ ಹೊರಟಿದ್ದು, ಇದೇ ಮಾರ್ಗದಲ್ಲಿ ಬಂದ ಬಸ್ ಯುವತಿ ಪ್ರಯಾಣಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸಮೇತ ಎಳೆದೊಯ್ದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ತಕ್ಷಣವೇ ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಾಳೆ.

ಇತ್ತೀಚಿನ ಸುದ್ದಿ