ವಿದ್ಯಾರ್ಥಿಗಳು ಖುಷ್: ಎನ್ ಇಪಿ ಎಫೆಕ್ಟ್; ಇನ್ಮುಂದೆ ವರ್ಷದಲ್ಲಿ ಎರಡು ಬಾರಿ ಬೋರ್ಡ್ ಪರೀಕ್ಷೆ - Mahanayaka
12:26 PM Saturday 21 - September 2024

ವಿದ್ಯಾರ್ಥಿಗಳು ಖುಷ್: ಎನ್ ಇಪಿ ಎಫೆಕ್ಟ್; ಇನ್ಮುಂದೆ ವರ್ಷದಲ್ಲಿ ಎರಡು ಬಾರಿ ಬೋರ್ಡ್ ಪರೀಕ್ಷೆ

students
23/08/2023

ಎನ್‌ಇಪಿ – ಹೊಸ ಶಿಕ್ಷಣ ನೀತಿ ಅನ್ವಯ ಇನ್ಮುಂದೆ ವಾರ್ಷಿಕ ಪರೀಕ್ಷೆಯಿಂದ ವಿದ್ಯಾರ್ಥಿಗಳನ್ನು ಒತ್ತಡ ಮುಕ್ತಗೊಳಿಸಲು ವರ್ಷದಲ್ಲಿ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಶಿಕ್ಷಣ ಸಚಿವಾಲಯ ತೀರ್ಮಾನಿಸಿದೆ.
ಹೊಸ ಶಿಕ್ಷಣ ನೀತಿಯಲ್ಲಿ ಬೋರ್ಡ್ ಪರೀಕ್ಷೆಗಳಿಂದ ಹಿಡಿದು ಭಾಷಾ ಅಧ್ಯಯನದವರೆಗಿನ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಇದರಲ್ಲಿ ಮುಖ್ಯವಾಗಿ ಸಾಂಪ್ರದಾಯಿಕ ವಾರ್ಷಿಕ ಬೋರ್ಡ್ ಪರೀಕ್ಷೆಗಳನ್ನು ಎರಡು ಬಾರಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅಂಕಗಳನ್ನು ಪಡೆಯಲು ಅವಕಾಶ ಸಿಗುತ್ತದೆ. ಅಲ್ಲದೇ ಏಕ ವಾರ್ಷಿಕ ಪರೀಕ್ಷೆಗಳಿಗೆ ಸಂಬಂಧಿಸಿದ ಹೆಚ್ಚಿನ ಒತ್ತಡದಿಂದ ವಿದ್ಯಾರ್ಥಿಗಳು ಮುಕ್ತರಾಗುತ್ತಾರೆ.

ಹೊಸ ಶಿಕ್ಷಣ ನೀತಿಯಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕು. ಅವುಗಳಲ್ಲಿ ಒಂದು ಭಾರತೀಯ ಭಾಷೆಯಾಗಬೇಕು. ಇದರಿಂದ ಭಾಷಾ ವೈವಿಧ್ಯತೆಗೆ ಪ್ರಾಮುಖ್ಯ ಸಿಗುತ್ತದೆ.


Provided by

ತಿಂಗಳ ತರಬೇತಿ ಮತ್ತು ಕಂಠಪಾಠದ ಮೇಲೆ ಅವಲಂಬಿತರಾಗುವುದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ತಿಳುವಳಿಕೆ ಮತ್ತು ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಹೊಸ ಚೌಕಟ್ಟು ಪ್ರತಿಪಾದಿಸುತ್ತದೆ. ಈ ವಿದ್ಯಾರ್ಥಿ ಕೇಂದ್ರಿತ ವಿಧಾನವು ವಿಷಯಗಳ ಆಳವಾದ ಗ್ರಹಿಕೆ ಮತ್ತು ಪ್ರಾಯೋಗಿಕ ಕೌಶಲ್ಯಗಳೊಂದಿಗೆ ಕಲಿಯುವವರಿಗೆ ಅಧಿಕಾರ ನೀಡಲು ಪ್ರಯತ್ನಿಸುತ್ತದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚಿನ ಸುದ್ದಿ