ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದ ಮಹಿಳಾ ಬಾಡಿ ಬಿಲ್ಡರ್ ಪ್ರಿಯಾ ಸಿಂಗ್ | ಭಾರತಕ್ಕೆ ಬಂದಾಗ ಕಾದಿತ್ತು ಅವಮಾನ! - Mahanayaka
5:19 AM Wednesday 11 - December 2024

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದ ಮಹಿಳಾ ಬಾಡಿ ಬಿಲ್ಡರ್ ಪ್ರಿಯಾ ಸಿಂಗ್ | ಭಾರತಕ್ಕೆ ಬಂದಾಗ ಕಾದಿತ್ತು ಅವಮಾನ!

priya singh
27/12/2022

ಇಡೀ ಮಹಿಳಾ ಸಮಾಜವೇ ಹೆಮ್ಮೆಪಡುವಂತಹ ಸಾಧನೆಯನ್ನು ಮಹಿಳಾ ಬಾಡಿ ಬಿಲ್ಡರ್ ಪ್ರಿಯಾ ಸಿಂಗ್ ಮಾಡಿದ್ದು, ಥಾಯ್ಲೆಂಡ್ ನ ಪಟ್ಟಾಯದಲ್ಲಿ ನಡೆದ 39ನೇ ಅಂತಾರಾಷ್ಟ್ರೀಯ ಮಹಿಳಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ  ಪ್ರಿಯಾ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ.

ಮೂಲತಃ ರಾಜಸ್ಥಾನದ ಬಿಕಾನೇರ್ ನವರಾದ ಪ್ರಿಯಾ ಅವರಿಗೆ ಕುಟುಂಬಸ್ಥರು ಅವರ 8ನೇ ವಯಸ್ಸಿನಲ್ಲೇ ವಿವಾಹ ಮಾಡಿಕೊಟ್ಟರು. ಕಾಲ ಕಳೆದಂತೆ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಕೆಟ್ಟ ಕಾರಣ ಅವರು ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು.

ಪ್ರಿಯಾ ಅವರು ಜಿಮ್ ನಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರು. ಅವರ ಚುರುಕುತನವನ್ನು ಕಂಡು ಜಿಮ್ ನಲ್ಲಿ ಕೆಲಸ ನೀಡಲಾಯಿತು. ಕೆಲಸದ ನಡುವೆ ಇತರರನ್ನು ಕಂಡು ತಾನೂ ಜಿಮ್ ನಲ್ಲಿ ತರಬೇತಿ ಪಡೆಯಲು ಆರಂಭಿಸಿದರು. ಇದೀಗ ರಾಜಸ್ಥಾನದ ಯಶಸ್ವಿ ಬಾಡಿ ಬಿಲ್ಡರ್ ಮಾತ್ರವಲ್ಲದೇ, ಬಾಡಿ ಬಿಲ್ಡರ್ ತರಬೇತುದಾರರು ಕೂಡ ಆಗಿದ್ದಾರೆ.

2018 ಮತ್ತು 2019 ಹಾಗೂ 2020ರಲ್ಲಿ ಮಿಸ್ ರಾಜಸ್ಥಾನ ಪ್ರಶಸ್ತಿಯನ್ನು ಕೂಡ ಇವರು ಮುಡಿಗೇಡಿರಿಸಿಕೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಪ್ರಿಯಾ ಸಿಂಗ್ ಅವರು, ತಮ್ಮ ಕಠಿಣ ಪ್ರಯತ್ನದಿಂದ ಈ ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ.

ಬಾಡಿ ಬಿಲ್ಡ್ ಮಾಡಲು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸವಾಲಿದೆ. ಕಠಿಣ ಪರಿಶ್ರಮ ಮತ್ತು ಹೆಚ್ಚು ಆಹಾರ ಸೇವನೆ ಮಾಡಬೇಕಾಗುತ್ತದೆ. ಪ್ರಿಯಾ ಅವರ ಯಶಸ್ಸಿಗೆ ಅವರ ಕುಟುಂಬಸ್ಥರು ಬೆಂಬಲ ನೀಡಿದರು. ಹೀಗಾಗಿಯೇ ಅವರು ಇಂದು ರಾಜಸ್ಥಾನದಲ್ಲಿ ಅತ್ಯಂತ ಯಶಸ್ವಿ ಜಿಮ್ ತರಬೇತುದಾರರಾಗಿದ್ದಾರೆ.

priya singh

ಪ್ರಿಯಾ ಸಿಂಗ್ ಅವರ ಕಥೆ ಕೇಳಿದರೆ ಎಂತಹವರಿಗಾದರೂ ಅವರ ಮೇಲೆ ಅಭಿಮಾನ ಹುಟ್ಟಬಹುದು. ಆದರೆ, ಅವರು ದೇಶಕ್ಕೆ ಚಿನ್ನದ ಪದಕ ತಂದರೂ ಅವರನ್ನು ದೇಶ ನಿರ್ಲಕ್ಷ್ಯವಹಿಸಿದೆ. ಕಾರಣ ಏನಂದ್ರೆ, ಅವರು ದಲಿತ ಜಾತಿಗೆ ಸೇರಿದವರು ಅನ್ನೋ ಕಾರಣಕ್ಕೆ. ಇದು ಈ ದೇಶದ ದುರಂತ. ಇಲ್ಲಿ ಜಾತಿಯ ಆಧಾರದಲ್ಲಿ ಎಲ್ಲವನ್ನೂ ಅಳೆಯುವ ಮನಸ್ಥಿತಿಗಳಿಗೆ ಅನ್ನೋದು ಅಂಗೈಗೆ ಹಿಡಿದ ಕೈಗನ್ನಡಿಯಾಗಿದೆ. ಇಂದು ಕ್ರೀಡೆಯಲ್ಲಿ ಮೀಸಲಾತಿ ಬೇಕು ಕೇಳಿದರೆ, ಹಲ್ಲು ಕಿಸಿದು ನಗುವ ಅವಿವೇಕಿಗಳನ್ನು ನಮ್ಮ ದೇಶದಲ್ಲಿ ಕಾಣಬಹುದಾಗಿದೆ. ಸಾಮಾಜಿಕ ಸಮಾನತೆ ಅಂದ್ರೇನು ಅನ್ನೋದು ತಿಳಿಯದ ಅಜ್ಞಾನಿಗಳಿಂದಾಗಿ ಇಂದು ಶತಶತಮಾನಗಳಿಂದ ಜಾತಿ ಆಚರಣೆಯಿಂದ ನೊಂದಿರುವ ಎಸ್ ಸಿ/ ಎಸ್ ಟಿ ಸಮುದಾಯ ಅವಮಾನಕ್ಕೀಡಾಗುತ್ತಲೇ ಇದೆ.

ಪ್ರಿಯಾ ಸಿಂಗ್ ಅವರಿಗೆ ಕನಿಷ್ಠ ಗೌರವ ಸೂಚಿಸುವ ಕೆಲಸ ಕೂಡ  ಆಗಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ಞಾವಂತರು  ಸಾಕಷ್ಟು ಪೋಸ್ಟ್ ಗಳನ್ನು ಹಾಕಿ ಪ್ರಶ್ನಿಸುತ್ತಿದ್ದಾರೆ. ರಾಷ್ಟ್ರಮಟ್ಟದ ಮಾಧ್ಯಮಗಳು ಪ್ರಿಯಾ ಸಿಂಗ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದಕ್ಕೆ ಮುಖ್ಯ ಕಾರಣ ಜಾತಿ ಅಸಮಾನತೆ ಅನ್ನುವ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ. ದೇಶದ ಹಳ್ಳಿಹಳ್ಳಿಗಳಲ್ಲಿಯೂ ಜನರು ಸ್ವಯಂ ಪ್ರೇರಿತವಾಗಿ ಪ್ರಿಯಾ ಸಿಂಗ್ ಗೆ ಅಭಿನಂದನೆ ಸಲ್ಲಿಸಲು ಮುಂದಾಗಲಿದ್ದಾರೆ. ಜಾತಿ ಪೀಡೆಗಳಿಗೆ ತಕ್ಕ ಉತ್ತರ ಸಿಗಲಿದೆ ಎಂಬ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ