ಬೊಕ್ಕ ತಲೆಗೆ ವಿಗ್ ಇಟ್ಟ, ಸುಂದರ ಯುವತಿಯನ್ನು ಮದುವೆಯಾಗೇ ಬಿಟ್ಟ | 1 ವರ್ಷದ ನಂತರ ನಡೆದದ್ದೇನು?

05/03/2021

ಲಕ್ನೋ: ಬೊಕ್ಕ ತಲೆಯ ಕಾರಣವನ್ನು ನೀಡಿ ಪತ್ನಿಯೋರ್ವಳು ತನ್ನ ಪತಿಗೆ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣವೊಂದು ಮೀರತ್ ನಲ್ಲಿ ನಡೆದಿದ್ದು, ಮದುವೆ ಸಂದರ್ಭದಲ್ಲಿ ಬೊಕ್ಕ ತಲೆಯ ವಿಚಾರವನ್ನು  ಮುಚ್ಚಿಡಲಾಗಿತ್ತು ಎಂದು ಪತ್ನಿ ಆರೋಪಿಸಿದ್ದಾಳೆ.

2020ರ ಜನವರಿಯಲ್ಲಿ ಈ ಜೋಡಿ ಗಾಝಿಯಾಬಾದ್ ನಲ್ಲಿ ವಿವಾಹವಾಗಿದ್ದಾರೆ.  1 ವರ್ಷಗಳ ವರೆಗೆ ಪತಿ ಹೇಗೋ ತನ್ನ ಬೊಕ್ಕ ತಲೆಯ ರಹಸ್ಯವನ್ನು ಮುಚ್ಚಿಟ್ಟಿದ್ದಾನೆ. ಆದರೆ ಇದೀಗ ಬೊಕ್ಕ ತಲೆಯ ವಿಚಾರ ಹೊರ ಬಂದಿದ್ದು, ಇದರಿಂದ ಪತ್ನಿ ಆಕ್ರೋಶಗೊಂಡಿದ್ದು, ಪತಿಗೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾಳೆ.

ತನ್ನ ಪತಿಗೆ ವಿವಾಹಕ್ಕೂ ಮೊದಲು ದಪ್ಪಕೂದಲು ಇತ್ತು. ಆದರೆ ವಿವಾಹದ ಬಳಿಕ ಆತನ ತಲೆಗೆ ವಿಗ್ ಧರಿಸಿದ್ದಾನೆ ಎನ್ನುವುದು ತಿಳಿದು ಬಂದಿದೆ. ಬೊಕ್ಕ ತಲೆಯ ಸಮಸ್ಯೆಯನ್ನು ಮುಚ್ಚಿಟ್ಟು ತನಗೆ ವಿಶ್ವಾಸ ದ್ರೋಹ ಮಾಡಲಾಗಿದೆ. ಹೀಗಾಗಿ ತಾನು ಅರ್ಜಿ ಸಲ್ಲಿಸಿರುವುದಾಗಿ ಆಕೆ ಹೇಳಿದ್ದಾಳೆ.

ವಿವಾಹವಾಗಿ ಇಲ್ಲಿಯವರೆಗೆ ತನ್ನ ವಿಗ್ ನ ರಹಸ್ಯವನ್ನು ಪತಿಯು ಪತ್ನಿಗೆ ತಿಳಿಸಿರಲೇ ಇಲ್ಲ. ಒಂದು ದಿನ ಈತ ವಿಗ್ ಧರಿಸಲು ಮರೆತು ಹೋಗಿದ್ದು, ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಪತ್ನಿ ನೋಡಿದ್ದು,  ಈ ವೇಳೇ ಈತ ಬೊಕ್ಕತಲೆಯವ ಎಂದು  ತಿಳಿದು ಆಕ್ರೋಶಗೊಂಡಿದ್ದಾಳೆ. ನನ್ನ ಪತಿ ಬೊಕ್ಕ ತಲೆಯವ ಎಂದು ತಿಳಿದರೆ, ನನಗೆ ಸ್ನೇಹಿತರು,  ಸಂಬಂಧಿಗಳ ಎದುರು ಮುಜುಗರವಾಗುತ್ತದೆ ಎಂದು ಆಕೆ ಹೇಳಿದ್ದಾಳೆ.

ಇತ್ತೀಚಿನ ಸುದ್ದಿ

Exit mobile version