ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿದ್ದು, ಸೆ.8ರಂದು ದೀಪಿಕಾಗೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸೆಪ್ಪೆಂಬರ್ ನಲ್ಲಿ ನಮ್ಮ ಫ್ಯಾಮಿಲಿಗೆ ಹೊಸ ಮೆಂಬರ್ ಬರಲಿದ್ದಾರೆ ಅಂತ ದೀಪಿಕಾ ಮತ್ತು ರಣ್ ವೀರ್ ಸಿಂಗ್ ದಂಪತಿ ಕೆಲ ತಿಂಗಳ ಹಿಂದೆ ಖುಷಿ ಸುದ್ದಿ ಹಂಚಿಕೊಂಡಿದ್ದರು.
ಶನಿವಾರ (ಸೆ.7) ಸಂಜೆ ದೀಪಿಕಾ ಪಡುಕೋಣೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಸೆಪ್ಟಂಬರ್ 28ರಂದು ರಣ್ ವೀರ್ ಸಿಂಗ್ ಅವರ ಹುಟ್ಟುಹಬ್ಬ ಇದ್ದು, ಅದೇ ದಿನ ಅವರಿಗೆ ಮಗು ಜನಿಸಲಿದೆ ಅಂತ ಚರ್ಚೆಗಳಾಗಿದ್ದವು. ಆದ್ರೆ ಸೆ.8ರಂದು ಈ ದಂಪತಿಗೆ ಹೆಣ್ಣು ಮಗು ಜನಿಸಿದೆ.
ಇನ್ನೂ ಮಗುವಿನ ಪೋಷಣೆಯ ಜವಾಬ್ದಾರಿಯನ್ನ ದೀಪಿಕಾ ಪಡುಕೋಣೆ ಅವರೇ ನೋಡಿಕೊಳ್ಳಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಅದಕ್ಕಾಗಿ ಅವರು ಯಾವುದೇ ಹೊಸ ಪ್ರಾಜೆಕ್ಟ್ ಗಳಿಗೆ ಸಹಿ ಹಾಕಿರಲಿಲ್ಲ. ಮಗು ತನ್ನ ಪೋಷಣೆಯಲ್ಲೇ ಬೆಳೆಯಬೇಕು ಅನ್ನೋದು ತಾಯಿಯಾಗಿ ದೀಪಿಕಾ ಪಡುಕೋಣೆ ಅವರ ಆಶಯವಂತೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: