ತಮಿಳುನಾಡು ದರ್ಗಾ ವಿವಾದ: ತಿರುಪತಿ ಕೃಷಿ ವಿಶ್ವವಿದ್ಯಾಲಯಕ್ಕೆ ಬಾಂಬ್ ಬೆದರಿಕೆ
![](https://www.mahanayaka.in/wp-content/uploads/2025/02/efe34e5dcbbb1b96de61102f7f47dab72315ef8a215e238b8d2aa606f796f377.0.jpg)
ತಿರುಪತಿ ಕೃಷಿ ವಿಶ್ವವಿದ್ಯಾಲಯದಲ್ಲಿ ಐಇಡಿಗಳನ್ನು ಇರಿಸಲಾಗಿದೆ ಎಂದು ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಪ್ರಾಂಶುಪಾಲರು ಮತ್ತು ಗೃಹ ಸಚಿವರಿಗೆ ಬರೆದ ಇಮೇಲ್ ನಲ್ಲಿ, “ಕೃಷಿ ಕಾಲೇಜು ಅವಳಿ ಪೈಪ್ ಐಇಡಿ ಸ್ಫೋಟಕ್ಕೆ ಬಲಿಯಾಗುತ್ತದೆ” ಎಂದು ಹೇಳಲಾಗಿದೆ.
ಫೆಬ್ರವರಿ 6 ರ ಗುರುವಾರ ಬೆಳಿಗ್ಗೆ 8.45 ಕ್ಕೆ ‘ಸ್ವಾತಿ ಬಿಲಾಲ್ ಮಾಲಿಕ್’ ಅವರ ಐಡಿಯಿಂದ ಕಳುಹಿಸಲಾದ ಇಮೇಲ್ ಪ್ರಕಾರ, ಮಧುರೈ ಜಿಲ್ಲೆಯ ತಿರುಪರಂಕುಂಡ್ರಮ್ ಬೆಟ್ಟದಲ್ಲಿರುವ ಮುರುಗನ್ ದೇವಾಲಯ ಮತ್ತು ಸಿಕಂದರ್ ದರ್ಗಾದ ವಿಷಯಕ್ಕೆ ಪ್ರತೀಕಾರವಾಗಿ ಸ್ಫೋಟಗಳನ್ನು ಯೋಜಿಸಲಾಗಿದೆ ಎನ್ನಲಾಗಿದೆ.
“ಇದು ಅನ್ಯಾಯದ ಸಿಕಂದರ್ ದರ್ಗಾ ಸಮಸ್ಯೆ ಮತ್ತು ಅಣ್ಣಾ ವಿಶ್ವವಿದ್ಯಾಲಯದ ನಮ್ಮದೇ ಪ್ರಾಧ್ಯಾಪಕ ಚಿತ್ರಕಲಾ ಗೋಪಾಲನ್ ಘಟನೆಯನ್ನು ನೆನಪಿಸುತ್ತದೆ” ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj