ಸಿಎಂ ಬೊಮ್ಮಾಯಿ ಬೆಂಗಾವಲು ವಾಹನ ಕಂಡು ಗಾಬರಿಯಿಂದ ಸ್ಕೂಟಿಯಿಂದ ಬಿದ್ದ ಮಹಿಳೆ!
ಬೆಳಗಾವಿ: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬೆಂಗಾವಲು ವಾಹನಕ್ಕೆ ಹೆದರಿದ ಮಹಿಳೆಯೊಬ್ಬರು ಸ್ಕೂಟಿಯಿಂದ ಬಿದ್ದು ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಸಾಂವಗಾವ್ ರಸ್ತೆಯಲ್ಲಿ ನಡೆದಿದ್ದು, ಏಕಾಏಕಿ ನಡೆದ ಘಟನೆಯಿಂದ ಗಾಬರಿಗೊಂಡು ಅವರು ಸ್ಕೂಟಿಯಿಂದ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಸಾಂವಗಾವ್ ರಸ್ತೆಯಲ್ಲಿ ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಾರ್ಯಕ್ರಮಕ್ಕೆ ಇದೇ ರಸ್ತೆಯಲ್ಲಿ ತಮ್ಮ ಬೆಂಗಾವಲು ವಾಹನ ಸಹಿತ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಎದುರು ಬಂದ ಬೆಂಗಾವಲು ವಾಹನ ಕಂಡು ಮಹಿಳೆ ಬೆದರಿದ್ದಾರೆ.
ಈ ವೇಳೆ ರಸ್ತೆಯಲ್ಲಿ ಮಹಿಳೆಯನ್ನು ನೋಡಿದ ಪೊಲೀಸರು ಪಕ್ಕಕ್ಕೆ ಹೋಗುವಂತೆ ಗದರಿದ್ದಾರೆ. ಈ ವೇಳೆ ಸ್ಕೂಟಿಯನ್ನು ಪಕ್ಕಕ್ಕೆ ತಿರುಗಿಸುವ ಭರದಲ್ಲಿ ಮಹಿಳೆ ಆತ ತಪ್ಪಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಪರಿಣಾಮವಾಗಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಸೊಂಟಕ್ಕೆ ವೇಲ್ ಕಟ್ಟಿಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ನಾಳೆ ನಡೆಯಲಿರುವ ಭಾರತ ಬಂದ್ ಗೆ ಕಾಂಗ್ರೆಸ್, ಜೆಡಿಎಸ್ ಬೆಂಬಲ
ದಲಿತ ಮಕ್ಕಳ ಊಟದ ತಟ್ಟೆಯನ್ನು ಇತರ ಮಕ್ಕಳು ಮುಟ್ಟುತ್ತಿಲ್ಲ | ದೇವರಂತ ಮಕ್ಕಳ ಮೇಲೆಯೂ ಅಸ್ಪೃಶ್ಯತೆಯ ಕರಿನೆರಳು
ಪ್ರತಿಭಟನೆ ಹೆಸರಲ್ಲಿ ಜನರಿಗೆ ತೊಂದರೆ ಕೊಡುವುದು ಬೇಡ | ಭಾರತ್ ಬಂದ್ ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
“ಮುಂದಿನ ದಿನಗಳಲ್ಲಿ ವಿಧಾನಸಭೆಯ ಸಭಾಂಗಣವನ್ನು ಮದುವೆ, ಮುಂಜಿಗೂ ಬಾಡಿಗೆಗೆ ಕೊಡಬಹುದು”
ಕೃಷ್ಣ ಬೆಣ್ಣೆ ಕದ್ದರೆ ತುಂಟಾಟ, ಈ ಬಾಲಕ ಹಸಿವಿನಿಂದ ತಿಂಡಿ ಕದ್ದರೆ ಅಪರಾಧವೇ? | ನ್ಯಾಯಾಧೀಶರ ಪ್ರಶ್ನೆ
ಪ್ರೀತಿಸಿ ವಿವಾಹವಾದ ಪತ್ನಿಗೆ ಅಕ್ರಮ ಸಂಬಂಧ | ಫೇಸ್ ಬುಕ್ ಲೈವ್ ಗೆ ಬಂದು ಪತಿ ಆತ್ಮಹತ್ಯೆ