ಬೊಮ್ಮಾಯಿಯನ್ನು ಕಿತ್ತು ಹಾಕಲು ಈಶ್ವರಪ್ಪ ಓಡಾಡುತ್ತಿದ್ದಾರೆ | ಸಿದ್ದರಾಮಯ್ಯ - Mahanayaka
8:29 PM Wednesday 11 - December 2024

ಬೊಮ್ಮಾಯಿಯನ್ನು ಕಿತ್ತು ಹಾಕಲು ಈಶ್ವರಪ್ಪ ಓಡಾಡುತ್ತಿದ್ದಾರೆ | ಸಿದ್ದರಾಮಯ್ಯ

siddaramaiha eshwarappa
05/12/2021

ಬೆಳಗಾವಿ: ಲಾಟರಿ ಹೊಡೆದು ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬೊಮ್ಮಾಯಿಯನ್ನು ಕಿತ್ತು ಹಾಕಲು ಈಶ್ವರಪ್ಪ ಓಡಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ರಮೇಶ ಜಾರಕಿಹೊಳಿ ಎಲ್ಲಾ ಕಡೆ ಸಿದ್ದರಾಮಯ್ಯ ಮೋಸ ಮಾಡಿದ್ರು ಅಂತಾರೆ. ಕುರುಬ ಸಮಾಜದ ವಿವೇಕರಾವ್ ಪಾಟೀಲ್ ​​​​​ಗೆ ಮೋಸ ಮಾಡಿದ್ದಾರೆ ಎನ್ನುತ್ತಾರೆ. ವಿವೇಕರಾವ್ ಪಾಟೀಲ್ ರಮೇಶ್​ ಜಾರಕಿಹೊಳಿ ಬ್ಯಾಗ್​ ಹಿಡಿದುಕೊಂಡು ತಿರುಗಾಡುವ ಗಿರಾಕಿ. ಆತ ನಮ್ಮ ಪಕ್ಷ ಸೇರಲೇ ಇಲ್ಲ. ನಮ್ಮ ಪಕ್ಷಕ್ಕೆ ಸೇರದವರಿಗೆ ಟಿಕೆಟ್ ಕೊಡೋದು ಹೇಗೆ ಎಂದು ಅವರು ಪ್ರಶ್ನಿಸಿದರು.

ಮೂರು ಜನ ಕುರುಬರಿಗೆ ಕಾಂಗ್ರೆಸ್​​​​​​ನಲ್ಲಿ ಟಿಕೆಟ್ ಕೊಟ್ಟಿದ್ದೇವೆ. ನೀವು ಎಷ್ಟು ಜನರಿಗೆ ಕೊಟ್ಟಿದ್ದೀರಿ. ರಮೇಶ್​ ಜಾರಕಿಹೊಳಿ ಆಡಿದ್ದೇನೆ, ಆಗೋಗಿದೆ. ಸಿದ್ಧಾಂತ, ಪಕ್ಷದ ಆಧಾರದ ಮೇಲೆ ರಾಜಕೀಯ ಮಾಡಬೇಕು. ಸ್ವಾರ್ಥಕ್ಕಾಗಿ ರಾಜಕೀಯ ಮಾಡಬಾರದು‌ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತಮಿಳು ಗೊತ್ತಿದ್ದವರಿಗೆ ಮಾತ್ರ ಸರ್ಕಾರಿ ನೌಕರಿ | ತಮಿಳುನಾಡು ಸರ್ಕಾರದಿಂದ ಮಹತ್ವದ ನಿರ್ಧಾರ

ಹಿರಿಯ ನಟ ಶಿವರಾಮ್ ಪಂಚಭೂತಗಳಲ್ಲಿ ಲೀನ: ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ

ನಂಬರ್ ಪ್ಲೇಟ್ ನಲ್ಲಿ SEX ಪದ ಬಳಕೆ: ಸಾರಿಗೆ ಇಲಾಖೆಗೆ ಮಹಿಳಾ ಆಯೋಗ ನೋಟಿಸ್

“ನಿನ್ನನ್ನು ನೋಡೋಕೆ ಬಂದಿದ್ದೀನಿ…” | ಪುಟಾಣಿ ಅಭಿಮಾನಿ ಜೊತೆಗೆ ಸಿದ್ದರಾಮಯ್ಯ ಮಾತು

ಭೀಕರ ಜ್ವಾಲಾಮುಖಿ ಸ್ಫೋಟ: 13 ಮಂದಿ ಸಾವು, ಗ್ರಾಮ ಬಿಟ್ಟು ಓಡಿದ ಜನ

ಇತ್ತೀಚಿನ ಸುದ್ದಿ