2 ಡೋಸ್ ಜೊತೆಗೆ ಬೂಸ್ಟರ್ ಡೋಸ್ ಪಡೆದುಕೊಂಡರೂ ಇಬ್ಬರಿಗೆ ವಕ್ಕರಿಸಿದ ಒಮಿಕ್ರಾನ್ - Mahanayaka
7:29 AM Wednesday 13 - November 2024

2 ಡೋಸ್ ಜೊತೆಗೆ ಬೂಸ್ಟರ್ ಡೋಸ್ ಪಡೆದುಕೊಂಡರೂ ಇಬ್ಬರಿಗೆ ವಕ್ಕರಿಸಿದ ಒಮಿಕ್ರಾನ್

covid vaccine
10/12/2021

ಸಿಂಗಪುರ: ಕೊವಿಡ್  ಲಸಿಕೆಯ ಎರಡು ಡೋಸ್ ಜೊತೆಗೆ ಬೂಸ್ಟರ್ ಲಸಿಕೆಯನ್ನೂ ಪಡೆದುಕೊಂಡಿದ್ದ ಇಬ್ಬರಿಗೆ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಇದರಿಂದಾಗಿ ಕೊವಿಡ್ ವಿರುದ್ಧ ಲಸಿಕೆಗಳು ನೀಡುತ್ತಿರುವ ರಕ್ಷಣೆಯ ಬಗ್ಗೆ ಅನುಮಾನಗಳು ಸೃಷ್ಟಿಯಾಗುವಂತಾಗಿದೆ.

ವಿಮಾನ ನಿಲ್ದಾಣವೊಂದರಲ್ಲಿ ಪ್ರಯಾಣಿಕ-ಸೇವಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 24 ವರ್ಷ ವಯಸ್ಸಿನ ಮಹಿಳೆಗೆ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಇದು ಸಿಂಗಪುರದ ಮೊದಲ ಒಮಿಕ್ರಾನ್ ಪ್ರಕರಣ ಎಂದು ಪರಿಗಣಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಇದರ ಜೊತೆಗೆ ಜರ್ಮನಿಯಿಂದ ಸಿಂಗಪುರಕ್ಕೆ ಬಂದ ವ್ಯಕ್ತಿಯೊಬ್ಬರಿಗೆ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ.

ಒಮಿಕ್ರಾನ್ ಸೋಂಕು ಕಾಣಿಸಿಕೊಂಡ ಇಬ್ಬರು ಕೂಡ ಕೊವಿಡ್ ಲಸಿಗೆಯ ಒಂದು, ಎರಡು ಡೋಸ್ ಲಸಿಕೆ ಪಡೆದುಕೊಂಡಿರುವುದೇ ಅಲ್ಲದೇ, ಅತ್ಯಂತ ಸುರಕ್ಷಿತ ಡೋಸ್ ಆಗಿರುವ ಮೂರನೇ ಡೋಸ್ ಬೂಸ್ಟರ್ ಡೋಸ್ ನ್ನು ಪಡೆದುಕೊಂಡಿದ್ದರು ಎಂದು ಸುದ್ದಿ ಸಂಸ್ಥೆ ಬ್ಲೂಮ್ ಬರ್ಗ್ ವರದಿ ಮಾಡಿದೆ.

ಒಮಿಕ್ರಾನ್ ರೂಪಾಂತರವನ್ನು ನಿಯಂತ್ರಿಸಲು ಲಸಿಕೆಯ ಮೂರನೇ ಡೋಸ್ ಅಗತ್ಯ ಎಂದು ಅಧ್ಯಯನಗಳಿಂದ ಗೊತ್ತಾಗಿದೆ ಎಂದು ಪೈಜರ್ ಮತ್ತು ಬಯೋಎನ್ ಟೆಕ್  ಹೇಳಿತ್ತು. ಎರಡು ಲಸಿಕೆಗಳು ನೀಡುವ ರಕ್ಷಣೆಗೆ ಹೋಲಿಸಿದರೆ, ಮೂರನೇ ಡೋಸ್ ಬೂಸ್ಟರ್ ಲಸಿಕೆಯಿಂದ ಸಿಗುವ ರಕ್ಷಣೆ ಅತ್ಯಧಿಕ ಎಂದು ಸಂಸ್ಥೆಗಳು ಹೇಳಿಕೊಂಡಿದ್ದವು. ಆದರೆ, ಇದೀಗ ಬೂಸ್ಟರ್ ಲಸಿಕೆ ಪಡೆದುಕೊಂಡವರಿಗೂ ಒಮಿಕ್ರಾನ್ ವಕ್ಕರಿಸಿದೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅರ್ಧ ಗಂಟೆಗಳ ಕಾಲ ಆಕಾಶದಲ್ಲೇ ಸುತ್ತು ಹಾಕಿದ ಸಿಎಂ ಪ್ರಯಾಣಿಸುತ್ತಿದ್ದ ವಿಮಾನ!

ರಾಜ್ಯದ ಜನತೆಗೆ ಬಿಗ್ ಶಾಕ್: ಬೇಸಿಗೆಗೆ ಮುನ್ನವೇ ಏರಿಕೆಯಾಗಲಿದೆಯೇ ವಿದ್ಯುತ್ ಬೆಲೆ?

ಮೊಟ್ಟೆ ಕೊಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯಕೊಟ್ಟಂತಾಗುತ್ತದೆ | ಪೇಜಾವರ ಶ್ರೀ

ಎರಡು ಲಾರಿ, ಒಂದು ಕಾರಿನ ನಡುವೆ ಸರಣಿ ಅಪಘಾತ!

ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು, ಹಿಂದೂ-ಮುಸ್ಲಿಂ ಅಂತ ಅಲ್ಲ | ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ