ರಮಝಾನ್ ನ 27ನೇ ರಾತ್ರಿಗೆ ಮಕ್ಕ ಮತ್ತು ಮದೀನಾದ ಎರಡೂ ಹರಂಗಳು ಸಜ್ಜು

ರಮಝಾನ್ ನ 27ನೇ ರಾತ್ರಿಗೆ ಮಕ್ಕ ಮತ್ತು ಮದೀನಾದ ಎರಡೂ ಹರಂಗಳು ಸಜ್ಜಾಗಿವೆ. ರಮಝಾನಿನ ಕೊನೆಯ ಬೆಸ ಸಂಖ್ಯೆಯಲ್ಲಿಯೇ ಅತ್ಯಂತ ಹೆಚ್ಚು ಮಹತ್ವವುಳ್ಳ ರಾತ್ರಿಯಾಗಿ 27ನೇ ರಾತ್ರಿ ಗುರುತಿಸಿಕೊಂಡಿದೆ. ಈ ಕಾರಣಕ್ಕಾಗಿ ಎರಡೂ ಹರಂಗಳಲ್ಲಿ 30 ಲಕ್ಷಕ್ಕಿಂತ ಅಧಿಕ ಮಂದಿ ಸೇರಬಹುದು ಎಂದು ಅಂದಾಜಿಸಲಾಗಿದ್ದು ಅದಕ್ಕೆ ಬೇಕಾದ ಸೌಲಭ್ಯಗಳನ್ನು ಸಿದ್ಧಗೊಳಿಸಲಾಗಿದೆ.
27ನೇ ರಾತ್ರಿಗೆ ಅತೀವ ಮಹತ್ವ ಇರುವುದರಿಂದ ಮಸ್ಜಿದುಲ್ ಹರಾಮ್ ಮತ್ತು ಮಸ್ಜಿದುನಬವಿಗೆ ಲಕ್ಷ ಲಕ್ಷ ಜನರು ಬರುತ್ತಾರೆ. ರಾತ್ರಿ 9 ಗಂಟೆಯಿಂದ ತರಾವೀಹ್ ನಮಾಝ್ ಪ್ರಾರಂಭವಾಗುತ್ತದೆ. ರಾತ್ರಿ 12:30ರ ಬಳಿಕ ವಿಶೇಷ ಕಿಯಾಮು ಲೈ ಲ್ ನಮಾಝ್ ಪ್ರಾರಂಭವಾಗುತ್ತದೆ.. ಆ ಬಳಿಕದ ದುವಾ ಮತ್ತು ಇನ್ನಿತರ ಚಟುವಟಿಕೆಗಳು ಮುಂಜಾನೆಯವರೆಗೆ ನಡೆಯುತ್ತದೆ.
ಮಕ್ಕಾದ ಮಸ್ತಿ ದುಲ್ ಹರಾಮ್ ಗೇ ವಿಶ್ವಾಸಿಗಳನ್ನು ಕೊಂಡೊಯ್ಯುವುದಕ್ಕಾಗಿ ಮಕ್ಕಾದ ಒಳಗೂ ಹೊರಗೂ ಆರು ರೀತಿಯ ಬಸ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಉಮ್ರ ಮತ್ತು ಹಜ್ ಸಚಿವಾಲಯ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj