ಬೌದ್ಧ ಭಿಕ್ಕುವಿನಂತೆ ಕಾಣಿಸಿಕೊಂಡ ಎಂ.ಎಸ್.ಧೋನಿ
14/03/2021
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್ ನ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಬೌದ್ಧ ಭಿಕ್ಕುವಿನ ಗೆಟಪ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅವರ ಫೋಟೋ ಶೂಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಈ ಗೆಟಪ್ ನಲ್ಲಿ ಧೋನಿ ಏಕೆ ಕಾಣಿಸಿಕೊಂಡಿದ್ದಾರೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಮಹೇಂದ್ರ ಸಿಂಗ್ ಧೋನಿ ಯಾವೊದೋ ಪ್ರಾಜೆಕ್ಟ್ ಸಂಬಂಧ ಈ ಫೋಟೋ ಶೂಟ್ ಮಾಡಿದ್ದಾರಾ? ಎನ್ನುವ ಅನುಮಾನಗಳಿವೆಯಾದರೂ ಈ ಫೋಟೋದ ಹಿಂದಿನ ರಹಸ್ಯ ಇನ್ನೂ ತಿಳಿದು ಬಂದಿಲ್ಲ.
ಈ ಫೋಟೋವನ್ನು ದಕ್ಷಿಣ ಭಾರತದ ಯಾವುದೋ ಯುದ್ಧಕಲೆ ತರಬೇತಿ ಶಿಬಿರದಲ್ಲಿ ಶೂಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೊಸ ಗೆಟಪ್ ಕಾಣಿಸಿಕೊಂಡಿರುವ ಧೋನಿ, ಇದೀಗ ಅಚ್ಚರಿಯನ್ನು ಸೃಷ್ಟಿಸಿದ್ದಾರೆ.