ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಕಾಪಾಡಿದ ಬೌದ್ಧ ಧರ್ಮದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ: ಸಿಎಂಗೆ ಮನವಿ
ರಾಯಚೂರು: ಈ ಸಾಲಿನ ಬಜೆಟ್ ನಲ್ಲಿ ಬೌದ್ಧ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಕನಿಷ್ಠ 200 ಕೋಟಿ ಹಣವನ್ನು ಮೀಸಲಿಡಬೇಕೆಂದು ರಾಜ್ಯ ಸರ್ಕಾರಕ್ಕೆ ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದ್ದು, ರಾಯಚೂರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಭಾರತ ದೇಶದಲ್ಲಿ ಹುಟ್ಟಿ ಜಗತ್ತಿಗೆ ಪಸರಿಸಿದ ಭಾರತ ಮೂಲದ ಏಕೈಕ ಧರ್ಮ ಬೌದ್ಧ ಧರ್ಮವಾಗಿದ್ದು, ಇದು ಭಾರತದ ಗರಿಮೆಯಾಗಿದೆ. ಜಾಗತಿಕ ಮಟ್ಟದಲ್ಲಿ ಇಂದಿಗೂ ಬೌದ್ಧ ಧರ್ಮ ಭಾರತದ ಹಿರಿಮೆ ಗರಿಮೆಯನ್ನು ಜಾಗತಿಕ ಮಟ್ಟದಲ್ಲಿ ಕಾಪಾಡಿದ್ದು, ಭಾರತಕ್ಕೆ ವಿಶ್ವಮನ್ನಣೆ ತಂದುಕೊಟ್ಟಿದೆ. ಆದರೆ ಭಾರತದಲ್ಲಿ ಬೌದ್ಧ ಧರ್ಮದ ಅಭಿವೃದ್ಧಿಗೆ ಸರ್ಕಾರ ಮುಂದಾಗುತ್ತಿಲ್ಲ. ಸರ್ಕಾರ ಇನ್ನಾದರೂ ಬೌದ್ಧ ಅಧಿವೃದ್ಧಿ ಪ್ರಾದಿಕಾರ ಸ್ಥಾಪಿಸಿ 200 ಕೋಟಿ ಹಣವನ್ನು ಮೀಸಲಿಡಬೇಕು ಎಂದು ಇದೇ ವೇಳೆ ವಿದ್ಯಾರ್ಥಿಗಳು ಒತ್ತಾಯಿಸಿದರು.
ಇತ್ತ ಬಿಜಾಪುರದಲ್ಲಿಯೂ ಈ ಕೂಗು ಕೇಳಿ ಬಂದಿದ್ದು, ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ರಾಜ್ಯಾದ್ಯಂತ ಈ ಹೋರಾಟ ಆರಂಭವಾಗಲಿದ್ದು, ರಾಜ್ಯಾದ್ಯಂತ ವಿವಿಧ ಸಂವಿಧಾನ ಪರ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸುವ ಸಾಧ್ಯತೆಗಳು ಕಂಡು ಬಂದಿವೆ.
ವಿಜಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತೀಯ ಬೌದ್ಧ ಸಭೆಯ ವೆಂಕಟೇಶ್ ವಗ್ಯಾ, ದಲಿತ ವಿದ್ಯಾರ್ಥಿ ಪರಿಷತ್ ನ ಅಕ್ಷಯ್ ಕುಮಾರ್, ಶಾಂತಪ್ಪ ಶಹಾಪುರ, ವೆಂಕಪ್ಪ ವಗ್ಗೆನ್ನವರ, ಭಾರತಿ ಹೊಸಮನಿ, ಶಿವು ಹೊಸಮನಿ, ಆನಂದ ಮುದೂರ, ಯಮನೂರಿ ಸಿಂದಗಿರಿ, ರೋಹಿತ್, ಬೀರಣ್ಣ, ಸತೀಶ್, ದರ್ಶನ್, ವೃಶಿಕೆಶಿ, ರಮೇಶ್ ಛಲವಾದಿ, ದಿಲೀಪ್ ಛಲವಾದಿ ಮೊದಲಾದವರು ಇದ್ದರು.
ರಾಯಚೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ನ ಜಿಲ್ಲಾ ಸಂಚಾಲಕ ಮೌನೇಶ ಎಂ.ಜೆ., ಪ್ರಭು ಹೇಮನಾಳ, ಮೌಲಾಲಿ ಹೇಮನಾಳ, ಗುರುಸ್ವಾಮಿ, ಭೀಮಪ್ಪ, ನಾಗರಾಜ, ಚನ್ನಬಸವ, ತಾಯಪ್ಪ ಮತ್ತಿತರರು ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೇಂದ್ರ ಸಚಿವ ಭಗವಂತ ಖೂಬಾ ವಾಹನದ ಮೇಲೆ ಕಲ್ಲು ತೂರಾಟ
ಎರಡೂವರೆ ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ: ಅಪರಾಧಿಗೆ ಮರಣದಂಡನೆ
ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆ
ಸಿಬಿಐ ಅಧಿಕಾರಿಗಳು ಎಂದು ಹೇಳಿ ಲಕ್ಷಾಂತರ ರೂ. ನಗದು, ಚಿನ್ನಾಭರಣ ದರೋಡೆ
ಕೆಂಪುಕೋಟೆ ಮೇಲೆ ಭಗವಧ್ವಜ ಹಾರಿಸಿಯೇ ಸಿದ್ದ: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ