ಭಾರತ –ಆಸ್ಟ್ರೇಲಿಯಾ ಸರಣಿ ಗೆಲುವನ್ನು ಬೌಲರ್ ಗಳು ನಿರ್ಧರಿಸುತ್ತಾರೆ | ಮಾಜಿ ವೇಗಿ ಜಹೀರ್ ಖಾನ್ - Mahanayaka

ಭಾರತ –ಆಸ್ಟ್ರೇಲಿಯಾ ಸರಣಿ ಗೆಲುವನ್ನು ಬೌಲರ್ ಗಳು ನಿರ್ಧರಿಸುತ್ತಾರೆ | ಮಾಜಿ ವೇಗಿ ಜಹೀರ್ ಖಾನ್

20/11/2020

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಸರಣಿಯಲ್ಲಿ ಬೌಲರ್ ಗಳು ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಲೆಜೆಂಡರಿ ಇಂಡಿಯನ್ ವೇಗಿ ಜಹೀರ್ ಖಾನ್ ಹೇಳಿದ್ದು, ಎರಡೂ ತಂಡಗಳನ್ನು ಕಡಿಮೆ ರನ್ ಮೂಲಕ ನಿಯಂತ್ರಿಸಲು ಬೌಲರ್ ಗಳ ಪಾತ್ರ ಹೆಚ್ಚಾಗಿ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾದ ಪಿಚ್ ಗಳು ಯಾವಾಗಲೂ ಉತ್ತಮ ಬೌನ್ಸ್ ಮತ್ತು ವೇಗವನ್ನು ಹೊಂದಿವೆ. ಆದ್ಧರಿಂದ ಏಕದಿನ,  ಟಿ-20 ಮತ್ತು ಟೆಸ್ಟ್ ಗಳನ್ನು ಪಂದ್ಯಗಳನ್ನು ಈ ಪಿಚ್ ಗಳಲ್ಲಿ ನಿಯಂತ್ರಿಸುವಲ್ಲಿ ಬೌಲರ್ ಗಳ ಪಾತ್ರ ಹೆಚ್ಚಿರುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಾವಳಿಯು 69 ದಿನಗಳ ವರೆಗೆ ನಡೆಯಲಿದೆ. ಮೂರು ಏಕದಿನ ಪಂದ್ಯಗಳು, ಮೂರು ಟಿ 20 ಐಗಳು, ನಾಲ್ಕು ಟೆಸ್ಟ್ ಪಂದ್ಯಗಳು ಇರಲಿವೆ. ಈ ಪಂದ್ಯಾಟಗಳು ನವೆಂಬರ್ 27ರಿಂದ ಆರಂಭವಾಗಲಿದೆ.

ಇತ್ತೀಚಿನ ಸುದ್ದಿ