ನಿಫಾ ವೈರಸ್ ಗೆ 12 ವರ್ಷ ವಯಸ್ಸಿನ ಬಾಲಕ ಬಲಿ! - Mahanayaka
10:39 PM Sunday 15 - December 2024

ನಿಫಾ ವೈರಸ್ ಗೆ 12 ವರ್ಷ ವಯಸ್ಸಿನ ಬಾಲಕ ಬಲಿ!

nipah virus
05/09/2021

ತಿರುವನಂತಪುರಂ: ಕೇರಳದಲ್ಲಿ ಮತ್ತೆ ನಿಫಾ ವೈರಸ್ ಪತ್ತೆಯಾಗಿದ್ದು, ನಿಫಾ ವೈರಸ್ ಸೋಂಕಿಗೊಳಗಾಗಿದ್ದ 12 ವರ್ಷ ವಯಸ್ಸಿನ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದೀಗ ಕೇರಳದಾದ್ಯಂತ ನಿಫಾ ವೈರಸ್ ಕುರಿತು ಆತಂಕ ಹೆಚ್ಚಿದೆ.

ಒಂದೆಡೆ ಕೇರಳದಲ್ಲಿ ಕೊರೊನಾ ವೈರಸ್ ಅಬ್ಬರಿಸುತ್ತಿದೆ. ಇನ್ನೊಂದೆಡೆಯಲ್ಲಿ ನಿಫಾ ವೈರಸ್ ಇದೀಗ ಭೀತಿ ಸೃಷ್ಟಿಸಿದೆ.  ಸೆ.1ರಂದು ಕೋಯೊಕ್ಕೋಡ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಬಾಲಕನ ಸ್ಯಾಂಪಲ್ ಸಂಗ್ರಹಿಸಿ ಪುಣೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿಗೆ ಕಳುಹಿಸಲಾಗಿತ್ತು. ಟೆಸ್ಟ್ ವರದಿಯಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿತ್ತು.

ಬಾಲಕನನ್ನು ತೀವ್ರ ನಿಗಾವಹಿಸಿ ವೈದ್ಯರು ಚಿಕಿತ್ಸೆ ನೀಡಿದ್ದರೂ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಇನ್ನೂ ರೋಗಿಯ ಪ್ರಾಥಮಿಕ ಸಂಪರ್ಕಕ್ಕೊಳಗಾದವರನ್ನು ಗುರುತಿಸಲಾಗಿದೆ. ಆದರೆ ಇತರರಲ್ಲಿ ಈ ಸೋಂಕು ಕಂಡು ಬಂದಿಲ್ಲ ಎಂದು ಹೇಳಲಾಗಿದೆ.

ನಿಫಾ ವೈರಸ್ ಗೆ ಬಾಲಕ ಬಲಿಯಾಗಿರುವುದು ಇದೀಗ ಆತಂಕಕ್ಕೆ ಕಾರಣವಾಗಿದ್ದು, ಕಣ್ಣೂರು ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ  ನಿಫಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಕೇರಳ ಆರೋಗ್ಯ ಇಲಾಖೆಯು ಆದೇಶವನ್ನು ನೀಡಿದೆ.

ಇನ್ನಷ್ಟು ಸುದ್ದಿಗಳು…

ದೆಹಲಿ ಪೊಲೀಸ್ ಸಬಿಯಾ ಸೈಫಿ ಸಾಮೂಹಿಕ ಅತ್ಯಾಚಾರ, ಬರ್ಬರ ಹತ್ಯೆ | 50 ಬಾರಿ ಚುಚ್ಚಿದರು, ಅಂಗಾಂಗ ಕತ್ತರಿಸಿದರು!

ಹಾರ, ತುರಾಯಿ ಸನ್ಮಾನ ಪಡೆದ ಸಿಎಂ ಬಸವರಾಜ್ ಬೊಮ್ಮಾಯಿ! | ಆದೇಶ ಪಾಲಿಸಬೇಕಾದವರು ಯಾರು?

ಕುಟುಂಬ ಸಂಘಟನೆಯ ಬದಲು ಪಕ್ಷ ಸಂಘಟನೆ ಧ್ಯೇಯವಾಗಿರಲಿ  | ಬಿ.ವೈ.ವಿಜಯೇಂದ್ರಗೆ ಯತ್ನಾಳ್ ಟಾಂಗ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ರದ್ದಾಗಲಿ | ಸಿಪಿಐ(ಎಂ) ಒತ್ತಾಯ

ಮಲಂಕರ ಧಮ೯ಕ್ಷೇತ್ರದ ಧಮಾ೯ಧ್ಯಕ್ಷ ಎಂ.ಆರ್.ಆಬ್ರಾಹಂರನ್ನು ಭೇಟಿ ಮಾಡಿದ ಐವನ್ ಡಿಸೋಜಾ

ಖಾಸಗಿ ವಾಹಿನಿ, ವೆಬ್ ಪೋರ್ಟಲ್, ಸಾಮಾಜಿಕ ಮಾಧ್ಯಮಗಳಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆ ತರುವಂತಹ ಸುದ್ದಿಗಳನ್ನು ಹರಡಲಾಗುತ್ತಿದೆ | ಸುಪ್ರೀಂ ಕೋರ್ಟ್ ಕಳವಳ

ಇತ್ತೀಚಿನ ಸುದ್ದಿ