ನೀರಿನ ಗುಂಡಿಯಲ್ಲಿ ಈಜಲು ತೆರಳಿದ್ದ ಬಾಲಕ ಸಾವು:  ಮೂವರ ರಕ್ಷಣೆ - Mahanayaka
1:22 AM Wednesday 5 - February 2025

ನೀರಿನ ಗುಂಡಿಯಲ್ಲಿ ಈಜಲು ತೆರಳಿದ್ದ ಬಾಲಕ ಸಾವು:  ಮೂವರ ರಕ್ಷಣೆ

drowns
06/10/2023

ಉಡುಪಿ/ಬೆಳಪು: ಬೆಳಪುವಿನಲ್ಲಿರುವ ಔದ್ಯೋಗಿಕ ನಗರದ ಗುಂಡಿಯೊಂದರಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳಲ್ಲಿ ಓರ್ವ ಮೃತಪಟ್ಟಿದ್ದು, ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ಬೆಳಪು ವಸತಿ ಬಡಾವಣೆಯ ನಿವಾಸಿ ವಿಶ್ವಾಸ್ (11) ಎಂದು ಗುರುತಿಸಲಾಗಿದೆ. ಈತ ಇನ್ನಂಜೆ ಶಾಲೆಯ ವಿದ್ಯಾರ್ಥಿ.

ವಿಶ್ವಾಸ್ ನಾಲ್ವರೊಂದಿಗೆ ಔದ್ಯೋಗಿಕ ನಗರದಲ್ಲಿ ನೀರು ತುಂಬಿದ್ದ ಗುಂಡಿಯೊಂದರಲ್ಲಿ ಈಜಲು ತೆರಳಿದ್ದರು. ತೀವ್ರ ಅಸ್ವಸ್ಥಗೊಂಡ ವಿಶ್ವಾಸ್ ನನ್ನು ಸ್ಥಳೀಯರಾದ ಜಹೀರ್ ಅಹ್ಮದ್ ಬೆಳಪು, ಉಚ್ಚಿಲದ ಜಲಾಲ್, ಹಂಝ, ಮೋಹಿಯುದ್ದೀನ್, ಶಾಹಿದ್ ರವರು ತುರ್ತಾಗಿ  ಉಡುಪಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ಹಾದಿಯಲ್ಲಿ ಮೃತಪಟ್ಟಿದ್ದಾನೆ.  ಮೃತ ಶರೀರವನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ