ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕ ಅಸ್ವಸ್ಥ: ರೈಲ್ವೆ ಅಧಿಕಾರಿಗಳು, ಒಳಕಾಡು ಅವರಿಂದ ರಕ್ಷಣೆ
26/09/2023
ಉಡುಪಿ: ರೈಲಿನಲ್ಲಿ ಹೆತ್ತವರೊಂದಿಗೆ ಪ್ರಯಾಣಿಸುತ್ತಿದ್ದ ಎಂಟು ವರ್ಷದ ಬಾಲಕ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಇಂದ್ರಾಳಿಯ ರೈಲ್ವೆ ಅಧಿಕಾರಿಗಳು ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡುವರ ಸಮಯ ಪ್ರಜ್ಞೆಯಿಂದ ಬಾಲಕ ಬದುಕುಳಿದಿದ್ದಾನೆ.
ಮರುಸಾಗರ್ ರೈಲಿನಲ್ಲಿ ಬಾಲಕ ಹೆತ್ತವರೊಂದಿಗೆ ಅಜ್ಮಿರಿನಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದನು. ರೈಲು ಕುಂದಾಪುರ ಬಂದಾಗ ಬಾಲಕ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ಗಾಬರಿಗೊಳಗಾದ ಹೆತ್ತವರು ಉಡುಪಿಯ ರೈಲ್ವೆ ಅಧಿಕಾರಿಗಳಲ್ಲಿ ನೆರವುಯಾಚಿಸಿದ್ದಾರೆ.
ಅಧಿಕಾರಿಗಳು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಒಳಕಾಡು ಅವರು ಬಾಲಕನನ್ನು ಇಂದ್ರಾಳಿಯ ರೈಲು ನಿಲ್ದಾಣದಿಂದ ಮಣಿಪಾಲ ಆಸ್ಪತ್ರೆಗೆ ದಾಖಲುಪಡಿಸಿ ಜೀವರಕ್ಷಕರಾದರು.