ಯುವತಿಯ ಮೇಲೆ ಕುದಿಯುವ ಎಣ್ಣೆ ಸುರಿದ ಪ್ರಿಯಕರ: ನೇಣು ಹಾಕಲು ಮುಂದಾದಾಗ ಎಸ್ಕೇಪ್ ಆದ ಯುವತಿ
ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವಳ ಮೇಲೆ ಆಕೆಯ ಪ್ರಿಯಕರ ಕುದಿಯುವ ಎಣ್ಣೆ ಸುರಿದ ಭೀಕರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಎಲೂರು ಜಿಲ್ಲೆಯಲ್ಲಿರುವ ಆತನ ಮನೆಯ ಕೊಠಡಿಗೆ ಯುವತಿಯನ್ನು ಕರೆದೊಯ್ದು ಈ ದುಷ್ಕೃತ್ಯ ಎಸಗಿದ್ದಾನೆ.
ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಜೆಎನ್ ಟಿಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಈ ಭೀಕರ ಹಲ್ಲೆಗೊಳಗಾದ ಯುವತಿಯಾಗಿದ್ದು, ಪೊಲೀಸರ ಮಾಹಿತಿ ಪ್ರಕಾರ ಈಕೆ ಏಲೂರಿನ ದುಗ್ಗಿರಾಳ ನಿವಾಸಿ ಅನುದೀಪ್ ಎಂಬಾತನನ್ನು ಪ್ರೀತಿಸುತ್ತಿದ್ದಳು.
ಅನುದೀಪ್ ವಿದ್ಯಾರ್ಥಿನಿಯನ್ನು ದುಗ್ಗಿರಾಳದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆತ ವಿದ್ಯಾರ್ಥಿನಿಯನ್ನು ಒಂದು ಕೋಣೆಯಲ್ಲಿ ಕಟ್ಟಿಹಾಕಿ ಹಿಂಸಿಸುತ್ತಿದ್ದ. ಕೊಲೆ ಬೆದರಿಕೆ ಹಾಕಿದ್ದ. ಮಧ್ಯರಾತ್ರಿಯ ನಂತರ ನೇಣು ಬಿಗಿದು ಕೊಲ್ಲಲು ಯೋಜಿಸಿದ್ದ ಆದರೆ, ಯುವತಿಯು ಆತನಿಂದ ತಪ್ಪಿಸಿಕೊಂಡು ಪೋಷಕರ ನೆರವಿನೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಅನುದೀಪ್ ಮಾದಕ ವ್ಯಸನಿಯಾಗಿದ್ದು, ಪ್ರೀತಿಯ ಹೆಸರಿನಲ್ಲಿ ಸಾಕಷ್ಟು ಹೆಣ್ಣಮಕ್ಕಳನ್ನು ವಂಚಿಸಿದ್ದ ಎನ್ನಲಾಗಿದೆ. ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw