ಮುತಾಲಿಕ್ ರಿಂದ ಬ್ರಾಹ್ಮಣ ಮುಸ್ಲಿಮ್ ವ್ಯವಹಾರಕ್ಕೆ ಆಕ್ಷೇಪ : ಖಂಡನೆ
ರಾಜ್ಯಾದ್ಯಂತ ಮುಸ್ಲಿಮರು ಮತ್ತು ಇಸ್ಲಾಮ್ ಧರ್ಮವನ್ನು ನಿಂದಿಸುವ ಮೂಲಕ ಇಲ್ಲಿನ ಹಿಂದುಳಿದ ವರ್ಗ, ಪರಿಶಿಷ್ಟರು ಮತ್ತು ಆದಿವಾಸಿಗಳನ್ನು ದ್ವೇಷದ ಅಮಲಿನಲ್ಲಿ ಇರಿಸುವ ಕಾಯಕವನ್ನೇ ಉಸಿರಾಗಿಸಿಕೊಂಡಿರುವ ಪ್ರಮೋದ್ ಮುತಾಲಿಕ್ ಎಂಬ ವೈದಿಕ, ಪ್ರಸ್ತುತ ಬ್ರಾಹ್ಮಣರನ್ನು ಬಿಡದೆ ನಿಂದಿಸುವ ಚಾಳಿಯನ್ನು ಆರಂಭಿಸಿದ್ದಾರೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಕಿಡಿಕಾರಿದ್ದಾರೆ.
ಸಂಸ್ಕಾರ ವಿಯೋಗಿಯಾಗಿರುವ ಲಜ್ಜೆಗೇಡಿ ಮುತಾಲಿಕರು ಪ್ರಸ್ತುತ ಹುಬ್ಬಳ್ಳಿಯಲ್ಲಿ ವೈದಿಕರು ತಮ್ಮ ದೈನಂದಿನ ಸಾಮಾಗ್ರಿಗಳನ್ನು ಮುಸ್ಲಿಮ್ ವರ್ತಕರಿಂದ ಖರೀದಿಸುತ್ತಾರೆ ಎಂದು ಆರೋಪಿಸಿ ಬ್ರಾಹ್ಮಣ ಸಮಾಜ ಮೂರ್ಖ ಸಮಾಜ. ರಾಮ್ ರಹೀಮ್ ಮಿಲ್ಕ ಡೈರಿಯಲ್ಲಿ ತುಪ್ಪ ಖರೀದಿಸುತ್ತಾರೆ, ಮುಸ್ಲಿಮರ ಕಡೆ ಕಬ್ಬು,ಎಲೆ,ಹೂ ಖರೀದಿ ಮಾಡಿದರೆ ಅಶಾಸ್ತ್ರ ಆಗುತ್ತದೆ, ಶಾಸ್ತ್ರ ಒಪ್ಪಲ್ಲ, ದೇವರು ಶಾಪ ಮಾಡುತ್ತಾರೆ, ಎಂಬಿತ್ಯಾದಿಯಾಗಿ ನಿಂದಿಸಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ಸಂಸ್ಕಾರ ವಿಯೊಗಿ ಮುತಾಲಿಕರು ಸರ್ವ ಕ್ರಿಯೆಯನ್ನು ತನ್ನ ಮತಾಂಧ ದೃಷ್ಟಿಯಿಂದ ವೀಕ್ಷಿಸಿದರೆ,ತನ್ನ ಸ್ವಂತ ಕುಲವು ಕೂಡ ಅದಕ್ಕೆ ಹೊರತಾಗಿಲ್ಲ ಎಂಬ ಸಂದೇಶವನ್ನು ನೀಡುವ ಮೂಲಕ ತನ್ನ ಮನಸ್ಥಿತಿಯ ಯಾವ ಮಟ್ಟಕ್ಕೆ ತಲುಪಿದೆ ಎಂದು ಅರಿವಾಗುತ್ತದೆ. ಕಾನೂನಿನ ಕುಣಿಕೆಯಲ್ಲಿ ಈಗಾಗಲೇ ಮುತಾಲಿಕ ರನ್ನು ಸೇರ್ಪಡೆ ಗೊಳಿಸಿದ್ದಿದ್ದರೆ ಇಂದು ಮುತಾಲಿಕರು ತನ್ನ ಸ್ವಯಂ ಕುಲವನ್ನೇ ಗುರಿ ಮಾಡುತ್ತಿರಲಿಲ್ಲ. ಮುತಾಲಿಕರ ವರ್ತನೆಗೆ ಖಂಡನೆ ಎಂದು ಕಿಡಿಕಾರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka