ಬ್ರಾಹ್ಮಣ, ಸಂಸ್ಕೃತ, ವೇದ, ಉಪನಿಷತ್ ಗಳ ಅವಹೇಳನ ಭಾರತೀಯರ ನಾಶಕ್ಕೆ ಮುಹೂರ್ತ ಇಟ್ಟ ಹಾಗೆ | ನಾರಾಯಣಾಚಾರ್ಯ - Mahanayaka
3:01 AM Wednesday 11 - December 2024

ಬ್ರಾಹ್ಮಣ, ಸಂಸ್ಕೃತ, ವೇದ, ಉಪನಿಷತ್ ಗಳ ಅವಹೇಳನ ಭಾರತೀಯರ ನಾಶಕ್ಕೆ ಮುಹೂರ್ತ ಇಟ್ಟ ಹಾಗೆ | ನಾರಾಯಣಾಚಾರ್ಯ

book brahma
17/07/2021

ಹುಬ್ಬಳ್ಳಿ: ಇತ್ತೀಚೆಗೆ ಬ್ರಾಹ್ಮಣ, ಸಂಸ್ಕೃತ, ವೇದ, ಉಪನಿಷತ್ ಗಳ ಅವಹೇಳನ ನಡೆಯುತ್ತಿದೆ. ಇದು ಭಾರತೀಯರ ನಾಶಕ್ಕೆ ಮುಹೂರ್ತ ಇಟ್ಟ ಹಾಗೆ ಎಂದು ಡಾ.ಕೆ.ಎಸ್.ನಾರಾಯಣಾಚಾರ್ಯ ಹೇಳಿದ್ದಾರೆ ಎಂದು ವರದಿಯಾಗಿದೆ.

ಬುಕ್ ಬ್ರಹ್ಮ ಹಾಗೂ ಸಾಹಿತ್ಯ ಪ್ರಕಾಶನ ಶನಿವಾರ ಆನ್ ಲೈನ್ ನಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಮಹಾಭಾರತ, ರಾಮಾಯಣವನ್ನು ಸಾಹಿತಿ ಎಂದೆನಿಸಿಕೊಂಡವರು ಅಳತೆಗೋಲನ್ನಾಗಿ ಇಟ್ಟುಕೊಂಡಿಲ್ಲ, ಜ್ಞಾನ ಪೀಠ ಪುರಸ್ಕೃತ ಕವಿಯೊಬ್ಬ ರಾವಣ, ಕುಂಭಕರ್ಣ ಮೃತಪಟ್ಟ ನಂತರ ಲವ-ಕುಶ ಹುಟ್ಟಿದರು ಎಂದು ಬರೆಯುತ್ತಾನೆ.  ಕಾಳಿದಾಸ, ಬಾಸ ಕವಿಗಳ ಕೃತಿಗಳನ್ನೇ ತಿರುಚಿ, ಮನಸ್ಸಿಗೆ ಬಂದ ಹಾಗೆ ಕೆಲವರು ಬರೆಯುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಾಹಿತ್ಯಕಾರನಿಗೆ ಪೆನ್ನು, ತುಟಿಯಲ್ಲಿ ಜವಾಬ್ದಾರಿ ಇರಬೇಕು. ನಮ್ಮಲ್ಲಿ ಕೆಲವರು ವೇದ, ಉಪನಿಷತ್ ಓದುತ್ತಾರೆ. ಆದರೆ ಅದರಲ್ಲಿರುವ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇದರಿಂದ ಅವುಗಳಿಗೆ ನಿರೀಕ್ಷಿತ ಸ್ಥಾನಗಳು ದೊರೆಕುತ್ತಿಲ್ಲ. ಹಾಗೆಯೇ ಮಹಾಭಾರತ, ರಾಮಾಯಣ ಅಂಗೈಯಲ್ಲಿದ್ದರೂ, ಧರ್ಮ, ಸಂಸ್ಕೃತಿ, ಪರಂಪರೆ ಎಂದು ಎಲ್ಲೆಲ್ಲೋ ಸುತ್ತುತ್ತಾರೆ. ನಮ್ಮ ಸಾಹಿತ್ಯವನ್ನು ವಿಮರ್ಶೆಯ ರೂಪದಲ್ಲಿ ನೋಡಬೇಕು, ಅರ್ಥೈಸಿಕೊಂಡು ವಿಮರ್ಶೆ ಮಾಡಬೇಕು. ಇಲ್ಲವಾದರೆ ಕಾವ್ಯಕ್ಕೆ ಅಪಪ್ರಚಾರವಾಗುತ್ತದೆ ಎಂದು ಅವರು ಹೇಳಿದರು.

ಇನ್ನಷ್ಟು ಸುದ್ದಿಗಳು…

ಚರ್ಚ್ ಗೆ ಸೇರಿದ ಜಾಗದಲ್ಲಿ ಹಿಂದೂ ದಂಪತಿಯ ಅಂತ್ಯಕ್ರಿಯೆ | ಸಹೋದರತೆ ಸಾರಿದ ಚರ್ಚ್

“ಜಾನುವಾರುಗಳಿಗೆ ಆಂಬುಲೆನ್ಸ್, ಜಿಲ್ಲೆಗೊಂದು ಗೋ ಶಾಲೆ”

ಮಾಧ್ಯಮಗಳನ್ನು ಇನ್ನು 6 ತಿಂಗಳಲ್ಲಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ | ಅಣ್ಣಾಮಲೈ ವಿವಾದಿತ ಹೇಳಿಕೆ

ಪ್ರೇಮಿಗೆ ಹಿಗ್ಗಾಮುಗ್ಗಾ ಥಳಿಸಿದರೂ, ಆತನ ಪ್ರೀತಿಗೆ ಕರಗಿ ಮಗಳ ಕೊಟ್ಟು ಮದುವೆ ಮಾಡಿದರು!

ಇತ್ತೀಚಿನ ಸುದ್ದಿ