ಬ್ರಾಹ್ಮಣವಾದದ ವಿರುದ್ಧ ಹೇಳಿಕೆ ನಟ ಚೇತನ್ ಗೆ ನೋಟಿಸ್

ಬೆಂಗಳೂರು: ಬ್ರಾಹ್ಮಣವಾದದ ವಿರುದ್ಧ ನಟ ಚೇತನ್ ನೀಡಿರುವ ಹೇಳಿಕೆ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.
ಬ್ರಾಹ್ಮಣರು ಮಾತ್ರವೇ ಉನ್ನತರು ಉಳಿದವರೆಲ್ಲರೂ ಕೆಳಮಟ್ಟದವರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧವಾಗಿದೆ. ಇದು ದೊಡ್ಡ ವಂಚನೆ ಎಂದು ನಟ ಚೇತನ್ ಅವರು ಹೇಳಿಕೆ ನೀಡಿದ್ದರು ಎಂದು ಹೇಳಲಾಗಿದೆ.
ಇನ್ನೂ ನಟ ಚೇತನ್ ವಿರುದ್ಧ ದೂರು ನೀಡುವಾಗ ಸರ್ಕಾರದ ಮುದ್ರೆಯನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆಯೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೇಲು, ಕೀಳುಗಳು ಇರಬಾರದು. ಹುಟ್ಟಿನಿಂದ ಯಾರು ಕೂಡ ಶ್ರೇಷ್ಟರಲ್ಲ ಕನಿಷ್ಟರಲ್ಲ ಎಂಬ ವಿಚಾರವನ್ನು ನಟ ಚೇತನ್ ಹೇಳಿದ್ದರು. ಆದರೆ, ಅವರು ಬ್ರಾಹ್ಮಣ ಸಮುದಾಯದ ವಿರುದ್ಧ ಮಾತನಾಡಿದ್ದಾರೆ ಎನ್ನುವ ದೂರು ದಾಖಲಾಗಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿದೆ.
ಇನ್ನೂ ಚೇತನ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಬೆಂಬಲ ದೊರಕಿದೆ. ಚೇತನ್ ಯಾವುದೇ ಸಮುದಾಯವನ್ನು ಗುರಿಯಾಗಿಸಿ ಹೇಳಿಕೆ ನೀಡಿಲ್ಲ, ಅವರು ತಮ್ಮ ಸ್ವಂತ ಅಭಿಪ್ರಾಯವನ್ನು ಕೂಡ ಹೇಳಿದ್ದಲ್ಲ, ಮಹಾನಿಯರ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನಾಡಿದ್ದಾರೆ ಎಂದು ವ್ಯಾಪಕ ಬೆಂಬಲ ಕೂಡ ವ್ಯಕ್ತವಾಗಿದೆ.
ಇದನ್ನೂ ಓದಿ: ಸರ್ಕಾರಿ ಮುದ್ರೆ ದುರ್ಬಳಕೆ ಮಾಡಿ ನಟ ಚೇತನ್ ವಿರುದ್ಧ ಪಿತೂರಿ | ದ್ರಾವಿಡ ಆರ್ಮಿಯಿಂದ ದೂರು