ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡಿದರೆ ಹುಷಾರ್… | ಬ್ರಾಹ್ಮಣ ಮುಖಂಡರಿಂದ ಎಚ್ಚರಿಕೆ - Mahanayaka
10:18 PM Wednesday 5 - February 2025

ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡಿದರೆ ಹುಷಾರ್… | ಬ್ರಾಹ್ಮಣ ಮುಖಂಡರಿಂದ ಎಚ್ಚರಿಕೆ

brahmana
28/06/2022

ರಾಮನಗರ: ಬ್ರಾಹ್ಮಣರ ಬಗ್ಗೆ ಯಾವುದೇ ರಾಜಕೀಯ ನಾಯಕರು ಹಗುರವಾಗಿ ಮಾತನಾಡಿದ್ರೆ, ಹುಷಾರ್ ಎಂದು ಬ್ರಾಹ್ಮಣ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ರಾಹ್ಮಣ ಅಡುಗೆ ಭಟ್ಟನಿಗೆ ನಮಸ್ಕಾರ ಮಾಡ್ತಾರೆ, ಉಳಿದ ಜಾತಿಯವರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಖಂಡಿಸಿರುವ ಬ್ರಾಹ್ಮಣರ ಹಾಗೂ ಅರ್ಚಕರ ಸಂಘಗಳ ಮೂಖಂಡರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರು, ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿರೋದು ಬ್ರಾಹ್ಮಣರು ಎಂದು ಹೇಳಿದ್ದಾರೆ. ಆದರೆ, ಜಾತಿ ವ್ಯವಸ್ಥೆಯನ್ನು ಸಿದ್ದರಾಮಯ್ಯ ಹುಟ್ಟುಹಾಕಿದರು. ಸಿದ್ದರಾಮಯ್ಯನವರು ಸಿಎಂ ಆಗಿರುವ ವೇಳೆ ಬ್ರಾಹ್ಮಣರಲ್ಲೇ 44 ಪಂಗಡವಾಗಿ ವಿಭಜಿಸಿ, ಬ್ರಾಹ್ಮಣರು ಅಂತ ನಂಬಲು ಸಾಧ್ಯವಾಗದ ದೌರ್ಜನ್ಯ ಬ್ರಾಹ್ಮಣರ ಮೇಲೆ ಎಸಗಿರುವ ಏಕೈಕ ಮುಖ್ಯಮಂತ್ರಿ ಎಂದು ಆರೋಪಿಸಿದರು.

ಇಂದಿರಾ ಗಾಂಧಿ ಕಾಲದಲ್ಲಿ ಎಲ್ಲ ಬ್ರಾಹ್ಮಣರ ಜಮೀನು ತೆಗೆದುಕೊಂಡು ಬ್ರಾಹ್ಮಣರನ್ನು ಬೀದಿಗೆ ತಳ್ಳಿದ್ದು, ಕಾಂಗ್ರೆಸ್ ನವರು. ನಿಮಗೆ ನಾಚಿಕೆಯಾಗಬೇಕು, ನಿಮಗೆ ಇತಿಹಾಸವನ್ನು ತಿಳಿದುಕೊಳ್ಳಬೇಕು ಸಿದ್ದರಾಮಯ್ಯನವರೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬ್ರಾಹ್ಮಣ ಅಡುಗೆಯವರು ಬಂದಾಗ ನಮಸ್ಕಾರ ಬುದ್ಧಿ ಅಂತ ಹೇಳುತ್ತಾರೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಸಂಸ್ಕಾರ ಪಡೆದುಕೊಂಡಿದ್ದೀವಿ, ನಮ್ಮ ಸಂಸ್ಕಾರಕ್ಕೆ ಜನ ನಮಸ್ಕಾರ ಮಾಡುತ್ತಾರೆ. ನಿಮಗೆ ಆ ಸಂಸ್ಕಾರ ಇಲ್ಲ ಅದಕ್ಕೆ ಮಾಡ್ತಾ ಇಲ್ಲ. ಸಂಸ್ಕಾರ ಬ್ರಾಹ್ಮಣರಿಗೆ ರಕ್ತದಲ್ಲೇ ಬಂದಿದೆ. ಅದನ್ನು ನೀವ್ಯಾರ್ರಿ ಕೇಳೋಕೆ? ನೀವೂ ಗಳಿಸಿಕೊಳ್ಳಿ ಯಾರು ಬೇಡ ಅಂದಿದ್ದಾರೆ? ಬ್ರಾಹ್ಮಣನಲ್ಲಿ ಶ್ರೇಷ್ಟತ್ವವನ್ನು ಗುರುತಿಸುವಂತಹ ಒಂದು ಚೈತನ್ಯವಿದೆ ಎಂದು ಅವರು ಹೇಳಿದರು.

ಒಬ್ಬ ಯಾದವನಾದ ಕೃಷ್ಣನಿಗೂ ನಮಸ್ಕಾರ ಮಾಡ್ತೀವಿ, ರಾಮನಿಗೂ ನಮಸ್ಕಾರ ಮಾಡ್ತೀವಿ. ನಮ್ಮದೇ ಬಗ್ಗೆ ಹೋರಾಟ ಮಾಡಿರುವ ಪರಶುರಾಮನಿಗೆ ಒಂದು ದೇವಸ್ಥಾನ ಕಟ್ಟಿಲ್ಲ ಇದು ಬ್ರಾಹ್ಮಣತ್ವ ಎಂದು ಅವರು ಹೇಳಿದರು.

ಯಾವುದೇ ರಾಜಕೀಯ ನಾಯಕರು ಬ್ರಾಹ್ಮಣತ್ವದ ಬಗ್ಗೆ ಮಾತನಾಡಿದರೆ ಹುಷಾರ್, ಇನ್ನು ಮುಂದಿನ ದಿನಗಳಲ್ಲಿ ಮಾತನಾಡಿದರೆ, ಉಗ್ರವಾದ ಹೋರಾಟ ರಾಜ್ಯಾದ್ಯಂತ ಮಾಡುತ್ತೇವೆ. ಬ್ರಾಹ್ಮಣರನ್ನು ಕೆದಕುವ ಕೆಲಸ ಪ್ರತಿನಿತ್ಯ ಮಾಡುತ್ತಲೇ ಇದ್ದೀರಿ. ಇನ್ನು ಮುಂದೆ ಮಾಡಿದರೆ, ನಾವು ಹೋರಾಟ ಮಾಡುತ್ತೇವೆ ಎನ್ನುವ ಎಚ್ಚರಿಕೆ ನೀಡುತ್ತೇವೆ ಎಂದು ಮುಖಂಡರೊಬ್ಬರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೆಜಿಎಫ್ ಹೆಸರಿನಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಪತ್ರಕರ್ತರ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ ಕಿಚ್ಚ ಸುದೀಪ್!

ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್: ವಿದ್ಯುತ್ ಬೆಲೆ ಏರಿಕೆ!

21 ವರ್ಷ ಜೊತೆಗಿದ್ದ ಎರಡನೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ!

ಶಾಲೆಗಳಿಗೆ ರಜೆ, ಪೆಟ್ರೋಲ್ ಗಾಗಿ ಕಾದು ಕುಳಿತ ಜನರು: ಶ್ರೀಲಂಕಾದ ದುಸ್ಥಿತಿ!

ಪತ್ನಿಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಓಡಿ ಬಂದ ಪತಿ: ಬೆಚ್ಚಿಬಿದ್ದ ವೈದ್ಯರು!

 

ಇತ್ತೀಚಿನ ಸುದ್ದಿ