ಬ್ರಾಹ್ಮಣ ಅನ್ನೋದು ಜಾತಿಯಲ್ಲ, ಅದು ಉನ್ನತ ಜೀವನ ವಿಧಾನ: ಬಿಜೆಪಿ ಹಿರಿಯ ನಾಯಕ ದಿನೇಶ್ ಶರ್ಮಾ
ಲಕ್ನೋ: ಬ್ರಾಹ್ಮಣ ಎಂಬುದು ಜಾತಿಯಲ್ಲ, ಅದು ಉನ್ನತ ಜೀವನ ವಿಧಾನವಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ದಿನೇಶ್ ಶರ್ಮಾ ಹೇಳಿದ್ದಾರೆ. ಗೌತಮ್ ಬುದ್ಧ ನಗರದಲ್ಲಿ ಜೇವರ್ ನಲ್ಲಿ ಬಿಜೆಪಿ ಅಭ್ಯರ್ಥಿ ಧೀರೇಂದ್ರ ಸಿಂಗ್ ಪರ ಪ್ರಚಾರದ ವೇಳೆ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆಯ ಹಿನ್ನೆಲೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಮತ್ತು ಬ್ರಾಹ್ಮಣವಾದದ ಬಗ್ಗೆ ಮತ್ತು ಜಾತಿವಾದದ ಬಗ್ಗೆ ಪಕ್ಷದ ನಿಲುವಿನ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಯಾರೋ ಓರ್ವರು ಬ್ರಾಹ್ಮಣರ ಬಗ್ಗೆ ನನ್ನ ಆಲೋಚನೆಗಳನ್ನು ಕೇಳಿದರು, ಅದಕ್ಕೆ ಉತ್ತರಿಸಿ, ಬಿಜೆಪಿಗೆ ‘ಸಬ್ಕಾ ಸಾಥ್, ಸಬ್ಕಾ ವಿಕಾಸ’ ಬೇಕು ಅಷ್ಟೇ… ಬ್ರಾಹ್ಮಣ ಅಥವಾ ಗುಜ್ಜರ್, ಜಾಟ್‌ಗಳು ಅಲ್ಲ. ಪ್ರತಿಯೊಂದು ಜಾತಿಗೂ ಅದರ ಮಹತ್ವವಿದೆ ಮತ್ತು ಅದಕ್ಕಾಗಿಯೇ ನಾವು ಇಲ್ಲಿ ಎಲ್ಲಾ ಜಾತಿಗಳನ್ನು ಬೆಂಬಲಿಸುತ್ತೇವೆ ಎಂದು ಹೇಳಿದೆ ಎಂದು ತಿಳಿಸಿದರು.
ನನ್ನನ್ನು ಬ್ರಾಹ್ಮಣತ್ವಕ್ಕೆ ಜೋಡಿಸಿದರೆ ಅದಕ್ಕೆ ನಾನು ಹೌದು ಎನ್ನುತ್ತೇನೆ. ನಾನು ಬ್ರಾಹ್ಮಣ ಮತ್ತು ಆ ಬಗ್ಗೆ ಹೆಮ್ಮೆಪಡುತ್ತೇನೆ. ನಾನು ಅದನ್ನು ಯಾವುದೇ ಅಗೌರವದಿಂದ ನೋಡುವುದಿಲ್ಲ. ಬ್ರಾಹ್ಮಣರ ಕೆಲಸವು ‘ಸರ್ವೇ ಭವಂತು ಸುಖಿನಾ’, ಇತರರ ಸಂತೋಷದಲ್ಲಿ ಸಂತೋಷವನ್ನು ಅನುಭವಿಸುವವನು ಬ್ರಾಹ್ಮಣ ಎಂದು ಸ್ಪಷ್ಟನೆ ನೀಡಿದರು.
ಬ್ರಾಹ್ಮಣ ಅನ್ನೋದು ಜಾತಿಯಲ್ಲ, ಉನ್ನತ ಜೀವನ ವಿಧಾನವನ್ನು ಬ್ರಾಹ್ಮಣ ಎಂದು ಕರೆಯಲಾಗುತ್ತದೆ. ಅವನು ಯಾವುದೇ ಜಾತಿಯೊಂದಿಗೆ ಸಂಘರ್ಷ ಹೊಂದಿಲ್ಲ. ಹುಟ್ಟಿನಿಂದ ಸಾಯುವವರೆಗೂ ಒಳ್ಳೆಯ ಕಾರ್ಯಕ್ಕಾಗಿ ಕೆಲಸ ಮಾಡುತ್ತಾರೆ ಎಂದು ವಿವರಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳು, ಜಾಟ್‌ಗಳು, ಗುಜ್ಜರ್‌ಗಳು, ಠಾಕೂರ್‌ಗಳು, ವೈಶ್ಯ ಮತ್ತು ಎಲ್ಲರಿಗಾಗಿ ಕೆಲಸ ಮಾಡುತ್ತದೆ. ನಮ್ಮಲ್ಲಿ ಸಚಿವರು, ಶಾಸಕರು, ಎಂಎಲ್‌ಸಿಗಳು ಜಾತಿವಾರು ಇದ್ದಾರೆ. ಇತರ ಪಕ್ಷಗಳಂತೆ ನಾವು ಜನರ ನಡುವೆ ಭೇದಭಾವ ಮಾಡಿಲ್ಲ ಎಂದು ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಿರಿಯ ನಟ ಅಶ್ವತ್ಥ್ ನಾರಾಯಣ್ ಇನ್ನಿಲ್ಲ
ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ
ಅಣ್ಣ ಹೇಳಿದಂತೆ ಅತ್ತಿಗೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೈದುನ
ಪಿಯುಸಿ ವಿದ್ಯಾರ್ಥಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣು
ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳಿಂದ ಮೆರವಣಿಗೆ!: ಬೀದಿ ರಾಜಕೀಯ ಕ್ಯಾಂಪಸ್ ನೊಳಗೆ ನುಸುಳಿದ್ದು ಹೇಗೆ?