ಗಾಝಾ ಮೇಲೆ ಇಸ್ರೇಲ್ ದಾಳಿ: ಬ್ರೆಝಿಲ್ ನಿಂದ ತೀವ್ರ ಖಂಡನೆ - Mahanayaka
10:14 PM Saturday 24 - August 2024

ಗಾಝಾ ಮೇಲೆ ಇಸ್ರೇಲ್ ದಾಳಿ: ಬ್ರೆಝಿಲ್ ನಿಂದ ತೀವ್ರ ಖಂಡನೆ

16/07/2024

ಗಾಝಾದ ಮೇಲೆ ದಾಳಿ ಮುಂದುವರಿಸಿರುವ ಇಸ್ರೇಲ್ ಅನ್ನು ಬ್ರೆಝಿಲ್ ತೀವ್ರವಾಗಿ ಖಂಡಿಸಿದೆ. ಪಶ್ಚಿಮೇಶಿಯಾದ ಶಾಂತಿಗೆ ಇಸ್ರೇಲ್ ಭಾರಿ ಬೆದರಿಕೆಯಾಗಿದೆ ಎಂದು ಅಧ್ಯಕ್ಷ ಲುಲು ಡ ಸಿಲ್ವ ಆರೋಪಿಸಿದ್ದಾರೆ. ಗಾಝಾದಲ್ಲಿ ನಡೆಯುತ್ತಿರುವ ಕಗ್ಗೊಲೆಯನ್ನು ಜಗತ್ತಿನ ನಾಯಕರು ಮೌನವಾಗಿ ನಿಂತು ನೋಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗಾಝಾದ ಖಾನ್ ಯೂನಿಸ್ ನಲ್ಲಿರುವ ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್ ದಾಳಿ ನಡೆಸಿರುವ ಮಾಹಿತಿಯನ್ನು ಹಂಚಿಕೊಂಡು ಲೂಲ ಡ ಸಿಲ್ವ ಈ ಮಾತುಗಳನ್ನು ಹೇಳಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸಂಧಾನ ಮಾಡುವುದನ್ನು ಇಸ್ರೇಲ್ ಪದೇ ಪದೇ ಉಲ್ಲಂಘಿಸುತ್ತಿದೆ ಇತ್ತೀಚಿಗಷ್ಟೇ ನೂರಕ್ಕಿಂತಲೂ ಅಧಿಕ ಮಂದಿಯನ್ನು ಬಾಂಬ್ ಹಾಕಿ ಸಾಯಿಸಿದೆ.

ಮಕ್ಕಳು ವೃದ್ಧರು ಮತ್ತು ಮಹಿಳೆಯರು ಈ ಬಾಂಬಿಗೆ ಬಲಿಯಾಗಿದ್ದಾರೆ. ಇದು ಖಂಡನೀಯ ಎಂದು ಲುಲ ಡ ಸಿಲ್ವಾ ಹೇಳಿದ್ದಾರೆ.


Advertisement

ಫೆಲೆಸ್ತೀನಿಯರನ್ನು ಹೀಗೆ ಸಾಮೂಹಿಕವಾಗಿ ಶಿಕ್ಷಿಸುವುದು ಭಯೋತ್ಪಾದನೆ ಎಂದು ಕೂಡ ಅವರು ಹೇಳಿದ್ದಾರೆ. ಇಸ್ರೇಲ್ ಜನಾಂಗ ಹತ್ಯೆಯ ವಿರುದ್ಧ ಧ್ವನಿಯೆತ್ತುತ್ತಿರುವವರಲ್ಲಿ ಲುಲಾ ಡ ಸಿಲ್ವ ಮೊದಲಿಗರಾಗಿರುತ್ತಾರೆ. ಗಾಝಾದ ಮೇಲೆ ಇಸ್ರೇಲ್ ದಾಳಿ ನಡೆಸಿದ ಕೂಡಲೇ ಅವರು ಇಸ್ರೇಲ್ ನಿಂದ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದ್ದರು. ಮಾತ್ರ ಅಲ್ಲ ರಾಜತಾಂತ್ರಿಕ ಸಂಬಂಧವನ್ನೇ ಕಡಿದುಕೊಂಡಿದ್ದರು. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕಗ್ಗೊಲೆಯು ಜರ್ಮನಿಯಲ್ಲಿ ಹಿಟ್ಲರ್ ಯಹೂದ್ಯರ ವಿರುದ್ಧ ನಡೆಸಿದ ಹಾಲೋ ಕಾಸ್ಟಿಗೆ ಸಮಾನ ಎಂದು ಕೂಡ ಅವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ