ನೀವು ಬೆಳೆದ ಬೆಳೆಗಳನ್ನು ಕೊಟ್ಟು, ಐಶಾರಾಮಿ ಕಾರು ಕೊಂಡುಹೋಗಿ: ಟೊಯೋಟಾದಿಂದ ರೈತರಿಗೆ ಆಫರ್
ಸುದ್ದಿ, ಅಚ್ಚರಿ: ಒಂದು ಕಾಲದಲ್ಲಿ ವಸ್ತು ವಿನಿಮಯ ಪದ್ಧತಿಗಳು ಇದ್ದವು ಎಂದು ಇತಿಹಾಸ ಪುಸ್ತಕಗಳಲ್ಲಿ ನಾವು ಓದಿದ್ದೇವೆ. ಆದರೆ, ಇದೀಗ ಆಟೋ ಮೊಬೈಲ್ ವಲಯದಲ್ಲಿ ವಸ್ತು ವಿನಿಮಯವನ್ನೇ ಹೋಲುವ ಹೊಸ ಪದ್ಧತಿಯನ್ನು ಜಪಾನ್ ಮೂಲದ ಕಂಪೆನಿಯು ಆರಂಭಿಸಿದ್ದು, ರೈತರು ಬೆಳೆದ ಬೆಳೆಯನ್ನು ಸ್ವೀಕರಿಸಿ, ಅವರಿಗೆ ತನ್ನ ಕಂಪೆನಿಯ ಕಾರನ್ನು ನೀಡುವ ವಿಶೇಷ ಆಫರ್ ನ್ನು ಕಂಪೆನಿಯು ನೀಡಿದೆ.
ಟೊಯೋಟಾ ಬಾರ್ಟರ್ ಎಂಬ ಹೆಸರಿನ ಈ ಹೊಸ ಯೋಜನೆ ರೈತರನ್ನು ಕಾರು ಖರೀದಿಗೆ ಉತ್ತೇಜಿಸುವಂತೆ ಮಾಡಿದೆ. ರೈತರು ಬೆಳೆದಿರುವ ಸೋಯಾಬೀನ್ ಅಥವಾ ಮೆಕ್ಕೆಜೋಳ ಬೆಳೆಯನ್ನು ಕಂಪೆನಿಗೆ ನೀಡಿದರೆ, ಟೊಯೋಟಾ ಎಸ್ ಯುವಿ ಅಥವಾ ಟೊಯೋಟಾ ಪಿಕಪ್ ನ್ನು ರೈತರು ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ರೈತರು ಟೊಯೋಟಾ ಹಿಲಕ್ಸ್ ಪಿಕಪ್ ಟ್ರಕ್, ಟೊಯೋಟಾ ಫಾರ್ಚೂನರ್ ಅಥವಾ ಟೊಯೋಟಾ ಕೊರೊಲ್ಲಾ ಕ್ರಾಸ್ ಎಸ್‌ಯುವಿ ವಾಹನಗಳನ್ನು ಕೂಡ ಕಂಪೆನಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.
ಜಪಾನ್ ನ ಕಂಪೆನಿಯು ಬ್ರೆಜಿಲ್ ನ ರೈತರಿಗೆ ಈ ಕೊಡುಗೆಯನ್ನು ನೀಡಿದೆ. ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆ ದರದಲ್ಲಿ ಕಂಪೆನಿಯು ತೆಗೆದುಕೊಳ್ಳುತ್ತದೆ. ಉತ್ತಮ ಗುಣಮಟ್ಟದ ಬೆಳೆಗಳನ್ನು ಮಾತ್ರವೇ ಕಂಪೆನಿಯು ಖರೀದಿಸುತ್ತದೆ. ರೈತರ ಬೆಳೆಗಳಿಗೆ ಯಾವಾಗ ಕಾರಿನ ಬೆಲೆಗೆ ಸಮಾನಾದ ಮೌಲ್ಯ ಬರುತ್ತದೆಯೋ ಆಗ ಕಂಪೆನಿಯು ಯಾವುದೇ ಷರತ್ತುಗಳಿಲ್ಲದೇ ರೈತರಿಗೆ ವಾಹನ ನೀಡಿ ಕಳುಹಿಸುತ್ತದೆ. ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ಶೋರೂಂಗೆ ಕೊಂಡು ಹೋಗಿ ನೀಡಬಹುದು. ಅಲ್ಲಿ ಪರಿಶೀಲನೆ ನಡೆಸಿದ ಬಳಿಕ ರೈತರು ಬೆಳೆದ ಬೆಳೆಗೆ ರೇಟ್ ಫಿಕ್ಸ್ ಆಗುತ್ತದೆ. ಒಂದು ವೇಳೆ ಕಾರಿನ ಮೌಲ್ಯಕ್ಕೆ ಸರಿದೂಗದಿದ್ದರೆ, ಮುಂದಿನ ಬಾರಿ ಮತ್ತೆ ಇನ್ನಷ್ಟು ಬೆಳೆಗಳನ್ನು ಮಾರಿ ಕಾರಿನ ಬೆಲೆಗೆ ಸರಿದೂಗಿಸಿ ಕಾರನ್ನು ಕೊಂಡೊಯ್ಯಬಹುದಾಗಿದೆ.
ಅಂದ ಹಾಗೆ ಬ್ರೆಜಿಲ್ ನಲ್ಲಿ ಟೊಯೋಟಾ ಕಂಪೆನಿಯ ವಾಹನಗಳನ್ನು 16 ಪ್ರತಿಶತ ರೈತರೇ ಕೊಂಡುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಂಪೆನಿಯು ಕಾರು ಮಾರಾಟವನ್ನು ಇನ್ನಷ್ಟು ಹೆಚ್ಚು ಮಾಡುವಲ್ಲಿ ರೈತರಿಗೆ ನಲ್ಲಿ ಈ ಆಫರ್ ನೀಡಿದೆ.
ಇನ್ನಷ್ಟು ಸುದ್ದಿಗಳು…
ಪಿಕ್ನಿಕ್ ಗೆ ಹೋಗಿದ್ದ ಒಂದೇ ಕುಟುಂಬದ ನಾಲ್ವರು ಕುಟುಂಬಸ್ಥರ ಕಣ್ಣ ಮುಂದೆಯೇ ನೀರುಪಾಲಾದರು!
ಮತ್ತು ಬರುವ ಔಷಧಿ ನೀಡಿ ಮಹಿಳಾ ಪೊಲೀಸ್ ಮೇಲೆ ಸಬ್ ಇನ್ಟ್ ಪೆಕ್ಟರ್ ನಿಂದ ಅತ್ಯಾಚಾರ
ಡಾಮಿನೊಸ್ ಪಿಜ್ಜಾ ಮಳಿಗೆಯಲ್ಲಿ ಯುವತಿಗೆ ಹಲ್ಲೆ ನಡೆಸಿದ ಮ್ಯಾನೇಜರ್ ಅರೆಸ್ಟ್
ಟೋಕಿಯೋ ಒಲಿಂಪಿಕ್ಸ್: ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ತುಳುನಾಡಿನ ದೈವ ಕೊರಗಜ್ಜನ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿದ ಕಿಡಿಗೇಡಿಗಳು!