ಉತ್ತರ ಪ್ರದೇಶದಲ್ಲಿ ಪೊಲೀಸ್ ತಂಡದ ಮೇಲೆ ರೌಡಿಶೀಟರ್ ಕುಟುಂಬಸ್ಥರಿಂದ ಹಲ್ಲೆ: ಕಾನ್ಸ್ ಟೇಬಲ್ ಸಾವು

26/12/2023

ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಕುಖ್ಯಾತ ರೌಡಿಶೀಟರ್ ನಿವಾಸದಲ್ಲಿ ಮಂಗಳವಾರ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಓರ್ವರು ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ. ಅಪರಾಧಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸ್ ತಂಡವು ನೋಟಿಸ್ ನೀಡಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ.

ಗುಂಡಿನ ದಾಳಿ ಭುಗಿಲೆದ್ದಿದ್ದರಿಂದ ಇಲ್ಲಿ ಘರ್ಷಣೆಯು ಮಾರಣಾಂತಿಕವಾಗಿ ಮಾರ್ಪಟ್ಟಿತು. ಇದರ ಪರಿಣಾಮವಾಗಿ ಪೊಲೀಸ್ ಕಾನ್ಸ್ ಟೇಬಲ್ ಗೆ ತೀವ್ರ ಗಾಯಗೊಂಡು ಸಾವನ್ನಪ್ಪಿದರು.

ವಿಷ್ಯ ತಿಳಿದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಹಾಗೂ ಹೆಚ್ಚಿನ ಪೊಲೀಸ್ ಪಡೆ ಗ್ರಾಮಕ್ಕೆ ಆಗಮಿಸಿತು. ಪೊಲೀಸರು ಇಡೀ ಗ್ರಾಮವನ್ನು ಸುತ್ತುವರೆದಿದ್ದು, ಸುವ್ಯವಸ್ಥೆ ಕಾಪಾಡಲು ತಾತ್ಕಾಲಿಕ ಕಂಟೋನ್ಮೆಂಟ್ ಆಗಿ ಪರಿವರ್ತಿಸಿದ್ದಾರೆ.

ದಾಳಿಯ ನಂತರ ಭಾರೀ ಪೊಲೀಸ್ ಕಾರ್ಯಾಚರಣೆ ನಡೆಯುತ್ತಿದ್ದು, ಇಡೀ ಗ್ರಾಮವನ್ನು ಲಾಕ್ ಡೌನ್ ಮಾಡಲಾಗಿದೆ. ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಲು ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬಿಶುನಾಗಢ ಪೊಲೀಸ್ ಠಾಣೆ ವ್ಯಾಪ್ತಿಯ ಧಾರನಿಧಿರ್ಪುರ್ ನಗರಿಯಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿ

Exit mobile version