ವರದಕ್ಷಿಣೆ ಕೊಡಿ ಅಂದಿದ್ದಕ್ಕೆ ವರನನ್ನು ಮರಕ್ಕೆ ಕಟ್ಟಿ ಹಾಕಿದ ವಧುವಿನ ಕುಟುಂಬಸ್ಥರು..!
ಮದುವೆ ಮನೆಯಲ್ಲೇ ವರ ವರದಕ್ಷಿಣೆ ಕೇಳಿದ್ದಕ್ಕೆ ವಧುವಿನ ಕಡೆಯವರು ವರನನ್ನೇ ಮರಕ್ಕೆ ಕಟ್ಟಿಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವಧು-ವರ ಹೂ-ಮಾಲೆಗಳನ್ನು ಬದಲಿಸಿಕೊಳ್ಳುವುದಕ್ಕೂ ಮೊದಲು ವರ ವಧುವಿನ ಕುಟುಂಬಕ್ಕೆ ವರದಕ್ಷಿಣೆಯ ಬೇಡಿಕೆ ಇಟ್ಟಿದ್ದ. ಇದರಿಂದ ಕೆಂಡಾಮಂಡಲವಾದ ವಧುವಿನ ಕುಟುಂಬದವರು ವರನನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ.
ವೈರಲ್ ಆಗಿರುವ ಈ ವೀಡಿಯೋದಲ್ಲಿ ವಧುವಿನ ಕುಟುಂಬದವರು ವರನನ್ನು ಮರಕ್ಕೆ ಕಟ್ಟಿಹಾಕುವುದು ಮಾತ್ರವಲ್ಲದೇ ಅವಾಚ್ಯವಾಗಿ ನಿಂದಿಸುವುದನ್ನು ಕೇಳಬಹುದು. ಆದರೂ ವಧುವಿನ ಕಡೆಯವರ ವರ್ತನೆಯನ್ನು ವರ ವಿರೋಧಿಸದೇ ಮೌನವಾಗಿ ನಿಂತಿರುವುದು ಕಾಣಿಸಿಕೊಂಡಿದೆ.
ಈ ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಮಾಂಧಾಟ ಪೊಲೀಸ್ ಠಾಣಾ ಪೊಲೀಸರು ವರನನ್ನು ಬಿಡುಗಡೆಗೊಳಿಸಿ ಬಳಿಕ ಆತನನ್ನು ವಶಕ್ಕೆ ತೆಗೆದುಕೊಂಡರು. ವಧು ಹಾಗೂ ವರನ ಕಡೆಯವರು ಬಳಿಕ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಆದರೆ ಎರಡೂ ಕಡೆಯವರು ಈ ಕುರಿತು ರಾಜಿ ಮಾಡಿಕೊಳ್ಳಲು ಮುಂದಾಗಲಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw