ಬ್ರಿಜ್ ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳಿಗೆ ನೀಡಿದ ಲೈಂಗಿಕ ಕಿರುಕುಳ ಅಷ್ಟಿಷ್ಟಲ್ಲ: ಬೆಚ್ಚಿಬೀಳಿಸುವಂತಿದೆ ಈತನ ಕಾಮುಕ ಕೃತ್ಯ!
ನವದೆಹಲಿ: ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಸಿಂಗ್ ನ ವಿರುದ್ಧ ಇರುವ ಒಂದೊಂದು ಆರೋಪಗಳು ಕೂಡ ಬೆಚ್ಚಿಬೀಳಿಸುವಂತಿದ್ದು, ಮಹಿಳಾ ಕುಸ್ತಿಪಟುಗಳನ್ನು ಬ್ರಿಜ್ ಭೂಷಣ್ ಅತ್ಯಂತ ಹೀನಾಯವಾಗಿ ನಡೆಸಿಕೊಂಡಿರುವುದು ಬೆಚ್ಚಿಬೀಳಿಸುವಂತಿದೆ.
ಕಳೆದ ತಿಂಗಳು ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ 7 ಮಹಿಳಾ ಕುಸ್ತಿಪಟುಗಳು ನೀಡಿದ ದೂರಿನ ಆಧಾರದಲ್ಲಿ ಎರಡು ಎಫ್ ಐಆರ್ ಗಳು ದಾಖಲಾಗಿದೆ. 2012ರಿಂದ 2022ರವರೆಗೆ ಭಾರತ ಹಾಗೂ ವಿದೇಶಗಳ ವಿವಿಧ ಸ್ಥಳದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರಿನಲ್ಲಿ ದಾಖಲಾಗಿದೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಗುಂಪಿನಲ್ಲಿರುವ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರನ್ನು ಪ್ರತ್ಯೇಕಿಸಿ ಒಬ್ಬರಿಗೆ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಎಲ್ಲ ಮಹಿಳಾ ಅಥ್ಲೀಟ್ ಗಳು ತಮ್ಮ ಕೊಠಡಿ ತೊರೆದಾಗ ಗುಂಪುಗಳಲ್ಲಿಯೇ ತೆರಳುತ್ತಿದ್ದರು. ಆದರೂ, ಅವರು ಗುಂಪಿನಲ್ಲಿರುವ ಒಬ್ಬರನ್ನು ಪ್ರತ್ಯೇಕವಾಗಿ ಕರೆದು ಅಸಮರ್ಪಕ ಪ್ರಶ್ನೆಗಳನ್ನು ಕೇಳಿ ಹಿಂಸಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನನ್ನ ಉಸಿರಾಟವನ್ನು ಪರೀಕ್ಷಿಸುವ ನೆಪದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ನನ್ನನ್ನು ಕರೆದರು, ನನ್ನ ಟಿ—ಶರ್ಟ್ ನ್ನು ಎಳೆದರು ಮತ್ತು ನನ್ನು ಹೊಟ್ಟೆಯ ಕೆಳಗೆ ಕೈ ಹಾಕಿ ಹೊಕ್ಕಿಳದ ಮೇಲೆ ಕೈ ಹಾಕಿದರು ಎಂದು ದೂರುದಾರರಲ್ಲಿ ಒಬ್ಬರು ತಿಳಿಸಿದ್ದಾರೆ.
ತರಬೇತುದಾರರಿಂದ ಅನುಮೋದಿಸದ ಅಜ್ಞಾತ ಖಾದ್ಯವನ್ನು ಅವರು ತನಗೆ ನೀಡಿದ್ದು, ಅದು ಆರೋಗ್ಯ ಮತ್ತು ದೈಹಿಕ ಕಾರ್ಯಕ್ಷಮತೆಗೆ ಅದು ಉತ್ತಮ ಎಂದು ಅವರು ಹೇಳಿದರು ಎಂದು ದೂರುದಾರೆ ಹೇಳಿದ್ದಾರೆ.
ವಿದೇಶದಲ್ಲಿ ಸ್ಪರ್ಧೆಯ ಸಂದರ್ಭದಲ್ಲಿ ಗಾಯಗೊಂಡಾಗ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂದು ತನ್ನೊಂದಿಗೆ ಲೈಂಗಿಕ ಬೆಳವಣಿಗೆಗೆ ಸಹಕರಿಸಿದರೆ, ಚಿಕಿತ್ಸಾ ವೆಚ್ಚವನ್ನು ಫೆಡರೇಶನ್ ಭರಿಸಲಿದೆ ಎಂದು ಆಮಿಷವೊಡ್ಡಿದ್ದರು ಎಂದು ಮತ್ತೋರ್ವ ಕುಸ್ತಿಪಟು ತಿಳಿಸಿದ್ದಾರೆ.
ನಾನು ಮ್ಯಾಟ್ ಮೇಲೆ ಮಲಗಿದ್ದಾಗ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಳಿಗೆ ಬಂದು ತರಬೇತುದಾರನ ಅನುಪಸ್ಥಿತಿಯಲ್ಲಿ ನನ್ನ ಅನುಮತಿ ಪಡೆಯದೇ ನನ್ನ ಟಿ—ಶರ್ಟ್ ನ್ನು ಎಳೆದಿದ್ದು, ನನ್ನ ಉಸಿರಾಟವನ್ನು ಪರೀಕ್ಷಿಸುವುದಾಗಿ ಹೇಳಿ ಸ್ತನ ಮತ್ತು ಹೊಟ್ಟೆಯ ಕೆಳಗಿನ ಭಾಗವನ್ನು ಸ್ಪರ್ಶಿಸಿದ್ದರು ಎಂದು ಪ್ರಶಸ್ತಿ ವಿಜೇತ ಮತ್ತೊಬ್ಬರು ಕುಸ್ತಿಪಟು ದೂರಿನಲ್ಲಿ ತಿಳಿಸಿದ್ದಾರೆ.
ನಾನು ಹೊಟೇಲ್ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಹೋಗುತ್ತಿದ್ದಾಗ ಪ್ರತ್ಯೇಕವಾಗಿ ನನ್ನನ್ನು ಊಟದ ಟೇಬಲ್ ಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಕರೆದರು. ಈ ವೇಳೆ ಅವರು ನನ್ನನ್ನು ತಬ್ಬಿಕೊಂಡು ಎದೆಯ ಮೇಲೆ ಕೈ ಇಟ್ಟರು. ಅಲ್ಲದೇ ನನ್ನು ಹೊಟ್ಟೆಯ ಮೇಲೆ ಕೈ ಹಾಕಿದರು. ನನ್ನ ಎದೆಯ ಮೇಲೆ ಪದೇ ಪದೇ ಕೈ ಹಾಕಿದರು. ಇದರಿಂದ ನನಗೆ ಆಘಾತವಾಯಿತು ಎಂದು ಮತ್ತೋರ್ವ ಕುಸ್ತಿಪಟು ದೂರಿನಲ್ಲಿ ತಿಳಿಸಿದ್ದಾರೆ.
ಕುಸ್ತಿಪಟುಗಳಿಗೆ ಅಗತ್ಯವಿರುವ ವಸ್ತುಗಳ ಖರೀದಿಗಾಗಿ ತನ್ನ ಪೋಷಕರೊಂದಿಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಾತನಾಡುವಂತೆ ಮಾಡಿದರು. ಕರೆ ಮುಗಿದ ಬಳಿಕ ತಾನು ಕುಳಿತಿದ್ದ ಹಾಸಿಗೆ ಬಳಿಗೆ ಬರುವಂತೆ ಕರೆದರು. ಆ ಬಳಿಕ ನನ್ನನ್ನು ಬಲವಂತವಾಗಿ ತಬ್ಬಿಕೊಂಡರು. ನನ್ನ ಅನುಮತಿ ಇಲ್ಲದೇ ಅವರು ದೈಹಿಕ ಸ್ಪರ್ಶಗಳನ್ನು ಮಾಡಿದರು. ಇದು ನನಗೆ ಇಷ್ಟವಾಗದ ಕಾರಣ ಅಳಲು ಪ್ರಾರಂಭಿಸಿದೆ.
ಈ ವೇಳೆ ಅವರು ತಮ್ಮ ದುಷ್ಕೃತ್ಯವನ್ನು ಮರೆ ಮಾಚುತ್ತಾ “ನಹೀ ನಹೀ ಫಾದರ್ ಕಿ ತರಹ್”(ಇಲ್ಲ, ಇಲ್ಲ ತಂದೆಯಂತೆ) ಎಂದು ನನಗೆ ಹೇಳಿದರು. ಬಳಿಕ ನನ್ನ ತಾಯಿಗೆ ಪದೇ ಪದೇ ಕರೆ ಮಾಡುವ ಮೂಲಕ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ ಎಂದು ಮತ್ತೋರ್ವ ದೂರುದಾರೆ ತಿಳಿಸಿದ್ದಾಳೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw