ಬ್ರಿಟಿಷ್ ಕಾಲದ ಬಂಗಲೆಯಲ್ಲಿ ಕಚೇರಿ ತೆರೆದ ಸಚಿವ ಎಸ್.ಅಂಗಾರ
ಮಂಗಳೂರು: ಸೂಕ್ತ ಸರ್ಕಾರಿ ಕಚೇರಿ ದೊರಕದ ಹಿನ್ನೆಲೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಅವರು ಬಂದರು ಇಲಾಖೆಯ ಸುಪರ್ದಿಯಲ್ಲಿದ್ದ ಸ್ಟೇಟ್ ಬ್ಯಾಂಕ್ – ರೊಸಾರಿಯೊ ಚರ್ಚ್ ರಸ್ತೆಯಲ್ಲಿರುವ ಪಾರಂಪರಿಕ ಬ್ರಿಟಿಷ್ ಕಾಲದ ಬಂಗಲೆಯಲ್ಲಿ ತಮ್ಮ ಕಚೇರಿ ತೆರೆದಿದ್ದಾರೆ.
ಈ ಭವ್ಯ ಬಂಗಲೆ ಬ್ರಿಟಿಷರ ಕಾಲದ ಹಳೆಯ ಬಂದರು ಪ್ರಮುಖ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿತ್ತು. 1918 ರಿಂದ ಈ ಬಂಗಲೆ ಬಂದರು ಅಧಿಕಾರಿಗಳ ನಿವಾಸವಾಗಿತ್ತು. 1980ರ ಬಳಿಕ ಈ ಬಂಗಲೆಯನ್ನು ಬಂದರು ಅಧಿಕಾರಿಗಳು ಬಳಸುತ್ತಿದ್ದರು. ಆದರೆ, ಆ ಬಳಿಕ ನಿರ್ಹಣೆ ಕೊರತೆಯಿಂದ ಕಟ್ಟಡ ಸಂಪೂರ್ಣ ದುರಸ್ತಿ ಇಲ್ಲದೇ ಪಾಳು ಬಿದ್ದಿತ್ತು.
ನಗರದ ಮಧ್ಯ ಭಾಗದಲ್ಲಿಯೇ ಇದ್ದರೂ ಈ ಪಾರಂಪರಿಕ ಕಟ್ಟಡ ಸದ್ಬಳಕೆಯಿಲ್ಲದಾಯಿತು. ಇದೀಗ 3 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಅವರ ಕಚೇರಿಯಾಗಿ ಮಾಡಿಕೊಳ್ಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಖ್ಯಾತ ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ಹೃದಯಾಘಾತದಿಂದ ನಿಧನ
ಶಬರಿಮಲೆ ಬೆಟ್ಟ ಹತ್ತುತ್ತಿದ್ದ ವೇಳೆ ಅಯ್ಯಪ್ಪ ಮಾಲಾಧಾರಿ ಹೃದಯಾಘಾತದಿಂದ ಸಾವು
ಕೊರೊನಾ ಗೊಣ್ಣೆ ಸುರಿಸುವ ವೈರಸ್ ಅಷ್ಟೆ… ಇದೊಂದು ಮೆಡಿಕಲ್ ಮಾಫಿಯಾ | ಡಾ.ಟಿ.ಹೆಚ್.ಆಂಜನಪ್ಪ
ಬಾತ್ ರೂಮ್ ಗೆ ನುಗ್ಗಿ ಮತಯಾಚಿಸಿದ ಬಿಜೆಪಿ ಶಾಸಕ: ಮತದಾರ ಕಂಗಾಲು!
ಬೆಳಗಾವಿ: ಮೂವರು ಕಂದಮ್ಮಗಳ ಸಾವು ಪ್ರಕರಣ; ತನಿಖೆಗೆ ಆದೇಶಿಸಿದ ಡಿಎಚ್ ಒ