ಅಣೆಕಟ್ಟಿನಲ್ಲಿ ಸಿಲುಕಿದ್ದ ಬೃಹತ್ ಮರಗಳ ತೆರವು ಕಾರ್ಯಾಚರಣೆ
ಬೆಳ್ತಂಗಡಿ: ಮುಂಡಾಜೆಯ ಕಡಂಬಳ್ಳಿಯಲ್ಲಿ ಮೃತ್ಯುಂಜಯ ನದಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿರುವ ಬೃಹತ್ ಪ್ರಮಾಣದ ಮರ ಮತ್ತು ತೆರವು ಕಾರ್ಯಾಚರಣೆ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ತಂಡದ ತಾಲೂಕಿನ ನಾನಾ ಘಟಕಗಳ ವತಿಯಿಂದ, ಬೆಳ್ತಂಗಡಿ ರೋಟರಿ ಕ್ಲಬ್, ಮುಂಡಾಜೆ ಗ್ರಾಮ ಪಂಚಾಯಿತಿ, ಮುಂಡಾಜೆ ರೋಟರಿ ಸಮುದಾಯ ದಳ, ಕಿಂಡಿ ಅಣೆಕಟ್ಟು ಹಿತರಕ್ಷಣಾ ಸಮಿತಿ, ಸ್ಥಳೀಯ ಸಂಘ ಸಂಸ್ಥೆ ಹಾಗೂ ಊರವರ ಸಹಕಾರದಲ್ಲಿ ಭಾನುವಾರ ನಡೆಯಿತು.
ಕಳೆದ ತಿಂಗಳಲ್ಲಿ ಹಲವಾರು ಬಾರಿ ನದಿ ನೀರು ಏರಿಕೆಯಾದ ಸಮಯದಲ್ಲಿ ಈ ಕಿಂಡಿ ಅಣೆಕಟ್ಟಿನಲ್ಲಿ ಭಾರಿ ಪ್ರಮಾಣದ ಮರಮಟ್ಟು ಸಂಗ್ರಹಗೊಂಡು ಸಮೀಪದ ಮುಂಡ್ರುಪಾಡಿ ಪರಿಸರದ ಹಲವರ ತೋಟಗಳನ್ನು ಆವರಿಸಿದೆ.
ಕಿಂಡಿ ಅಣೆಕಟ್ಟಿನಲ್ಲಿ ತ್ಯಾಜ್ಯದೊಂದಿಗೆ ಹೂಳು ತುಂಬಿ, ನದಿ ನೀರು ಸರಾಗವಾಗಿ ಹರಿಯಲು ಅಡ್ಡಿ ಉಂಟಾಗಿತ್ತು. ಇದರಿಂದಾಗಿ ಸಮೀಪದ ಹಲವರ ತೋಟಗಳಿಗೂ ನೀರು ನುಗ್ಗಿತ್ತು. ಇದಕ್ಕೂ ಮೊದಲು ಜುಲೈ ಕೊನೆಯ ವಾರದಲ್ಲಿ ಕಿಂಡಿ ಅಣೆಕಟ್ಟಿನ ಫಲಾನುಭವಿಗಳು ಅರಮಟ್ಟು ತೆರೆವುಗೊಳಿಸಿದ್ದರು.
ಈ ಕಾಮಗಾರಿ ನಡೆದ ಎರಡೇ ದಿನಗಳಲ್ಲಿ ಮತ್ತೆ ನದಿಯಲ್ಲಿ ನೀರು ಏರಿಕೆ ಉಂಟಾಗಿ ಭಾರಿ ಪ್ರಮಾಣದ ಮರಮಟ್ಟು ಸಂಗ್ರಹ ಗೊಂಡಿತ್ತು. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮರಮಟ್ಟು ತೆರವಿಗೆ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಹಕಾರ ಕೋರಿದರು. ಅದರಂತೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ರವರ ಮಾರ್ಗದರ್ಶನದಲ್ಲಿ ಯೋಜನಾಧಿಕಾರಿ ಜೈವಂತ್ ಪಟಗಾರ ಅವರ ನಿರ್ದೇಶನದಂತೆ ಶೌರ್ಯ ತಂಡದ ಸದಸ್ಯರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka