ಟೂತ್ ಪೇಸ್ಟ್ ಎಂದು ಭಾವಿಸಿ, ಇಲಿ ವಿಷದಲ್ಲಿ ಹಲ್ಲುಜ್ಜಿದ ಯುವತಿ ಸಾವು! - Mahanayaka
1:22 AM Wednesday 11 - December 2024

ಟೂತ್ ಪೇಸ್ಟ್ ಎಂದು ಭಾವಿಸಿ, ಇಲಿ ವಿಷದಲ್ಲಿ ಹಲ್ಲುಜ್ಜಿದ ಯುವತಿ ಸಾವು!

toothbrush
15/09/2021

ಮುಂಬೈ: ಟೂತ್ ಪೇಸ್ಟ್ ಎಂದು ಭಾವಿಸಿ, ಇಲಿ ವಿಷದಲ್ಲಿ ಹಲ್ಲುಜ್ಜಿದ ಯುವತಿಯೋರ್ವಳು ದಾರುಣವಾಗಿ ಸಾವಿಗೀಡಾದ ಘಟನೆ ಮುಂಬೈನಲ್ಲಿ ನಡೆದಿದ್ದು, ಟೂತ್ ಪೇಸ್ಟ್ ನ ಟ್ಯೂಬ್ ನಂತೆಯೇ ಬರುತ್ತಿರುವ ಇಲಿಪಾಶಾಣದ ಟ್ಯೂಬ್ ಗಳು ಜನರ ಪ್ರಾಣಕ್ಕೆ ಸಂಚಕಾರವಾಗುತ್ತಿದೆ.

ಮುಂಬೈ ಧಾರವಿ ಪ್ರದೇಶದಲ್ಲಿ ವಾಸವಿರುವ 18 ವರ್ಷ ವಯಸ್ಸಿನ ಅಫ್ಸಾನಾ ಖಾನ್ ಮೃತಪಟ್ಟ ಯುವತಿಯಾಗಿದ್ದಾಳೆ.  ಇಲಿ ವಿಷವನ್ನು ಟೂತ್ ಬ್ರಷ್ ಗೆ ಹಾಕಿ ಹಲ್ಲುಜ್ಜಿದ್ದು, ಈ ವೇಳೆ ರುಚಿ ಬದಲಾವಣೆಯಾಗಿರುವುದು ಆಕೆಗೆ ಗೊತ್ತಾಗಿದೆ. ತಕ್ಷಣವೇ ಉಗುಳಿ ಬಾಯಿಯನ್ನು ತೊಳೆದಿದ್ದಾಳೆ. ಆದರೆ, ಅಷ್ಟರಲ್ಲೇ ವಿಷ ಆಕೆಯ ದೇಹವನ್ನು ಪ್ರವೇಶಿಸಿದ್ದು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾಳೆ.

ಈ ವೇಳೆ ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಆಕೆಯ ದೇಹವನ್ನು ವಿಷ ಪ್ರವೇಶಿಸಿತ್ತು.  ಎರಡು ದಿನಗಳ ಕಾಲ ನಿರಂತರವಾಗಿ ವೈದ್ಯರು ಚಿಕಿತ್ಸೆ ನೀಡಿದರೂ ಫಲಿಸದೇ ಅಫ್ಸಾನಾ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಬಿಗ್ ಬ್ರೇಕಿಂಗ್ ನ್ಯೂಸ್:  ಖ್ಯಾತ ನಟ ಸೋನುಸೂದ್ ಕಚೇರಿ ಮೇಲೆ ಐಟಿ ದಾಳಿ

ಕಲಾಪದ ವೇಳೆ ಕೊನೆಯ ಸೀಟಿನಲ್ಲಿ ಕುಳಿತು ಮೌನಕ್ಕೆ ಜಾರಿದ ಮಾಜಿ ಸಿಎಂ ಯಡಿಯೂರಪ್ಪ

ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ಸದಸ್ಯರು!

ಮಂಗಳೂರು: ನಿಫಾ ವೈರಸ್ ಶಂಕೆ ಇದ್ದ ಯುವಕನ ಪರೀಕ್ಷೆ ವರದಿ ನೆಗೆಟಿವ್ | ಆರೋಗ್ಯಾಧಿಕಾರಿ

6 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಆರೋಪಿಯನ್ನು ಎನ್ ಕೌಂಟರ್ ಮಾಡುತ್ತೇವೆ | ತೆಲಂಗಾಣ ಸಚಿವ ಬಹಿರಂಗ ಹೇಳಿಕೆ

ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ ಗೆ ಹೋಗಿದ್ದ ವೈದ್ಯೆ ಕೃಷಿ ಹೊಂಡದಲ್ಲಿ ಮುಳುಗಿ ಸಾವು!

 

ಇತ್ತೀಚಿನ ಸುದ್ದಿ