ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾದ ಅಕ್ಷಯ್ ಕುಮಾರ್!: ಶಿವಾಜಿ ಮಹಾರಾಜರ ಕಾಲದಲ್ಲಿ ಬಲ್ಬ್! - Mahanayaka

ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾದ ಅಕ್ಷಯ್ ಕುಮಾರ್!: ಶಿವಾಜಿ ಮಹಾರಾಜರ ಕಾಲದಲ್ಲಿ ಬಲ್ಬ್!

akshai kumar
10/12/2022

ಹಲವು ವೈಫಲ್ಯಗಳ ನಂತರ ನಟ ಅಕ್ಷಯ್ ಕುಮಾರ್ ʼವೇದಾತ್ ಮರಾಠೆ ವೀರ್ ದೌಡ್ಲೆ ಸಾತ್’ ಅನ್ನೋ ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು, ಫಸ್ಟ್ ಲುಕ್ ನಲ್ಲಿ ಚಿತ್ರ ತಂಡ ಮಾಡಿದ ಎಡವಟ್ಟು ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.


Provided by

ಅಕ್ಷಯ್ ಕುಮಾರ್ ಅವರ ಚಿತ್ರದ ಫಸ್ಟ್ ಲುಕ್ ಕಂಡು ನಟ ಪ್ರಕಾಶ್ ರೈ ಕೂಡ ಕಾಲೆಳೆದಿದ್ದಾರೆ. ವಿಡಿಯೋದಲ್ಲಿ ಶಿವಾಜಿ ಮಾಹಾರಾಜ ಪ್ರವೇಶ ಮಾಡುವ ವೇಳೆ ಅವರ ಹಿಂಬದಿಯಲ್ಲಿ ದೀಪಗಳ ಗೊಂಚಲು ಕಾಣಿಸುತ್ತದೆ. ಆದರೆ, ಶಿವಾಜಿ ಅವರ ಕಾಲದಲ್ಲಿ ವಿದ್ಯುತ್ ದೀಪಗಳು ಎಲ್ಲಿಂದ ಬರುತ್ತದೆ ಅನ್ನೋ ಪ್ರಶ್ನೆಗಳನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

1630 ರಿಂದ 1680 ರವರೆಗೆ ಆಳಿದ ಛತ್ರಪತಿ ಶಿವಾಜಿ ಮಹಾರಾಜರ ಅವಧಿಯ ನಂತರ ಬಲ್ಬ್‌ಗಳನ್ನು ಕಂಡುಹಿಡಿಯಲಾಗಿದೆ. ಆದರೆ ಶಿವಾಜಿ ಮಹಾರಾಜರ ಕಾಲದಲ್ಲಿ ಬಲ್ಬ್ ಇತ್ತು ಎಂಬಂತೆ ಚಿತ್ರದಲ್ಲಿ ತೋರಿಸಿರುವುದು ಇದೀಗ ಅಕ್ಷಯ್ ಕುಮಾರ್ ವಿರುದ್ಧ ಮತ್ತಷ್ಟು ಟ್ರೋಲ್ ಗಳು ಸೃಷ್ಟಿಯಾಗಲು ಕಾರಣವಾಗಿದೆ.


Provided by

ಪ್ರಧಾನಿ ಮೋದಿ ಹಾಗೂ ಅಕ್ಷಯ್ ಕುಮಾರ್ ಅವರ ಫೋಟೋ ಬಳಸಿ, ಟ್ರೋಲ್ ಮಾಡಲಾಗುತ್ತಿದ್ದು, ಶಿವಾಜಿ ಮಹಾರಾಜರ ಕಾಲದಲ್ಲಿ ಬಲ್ಬ್ ಎಲ್ಲಿತ್ತು ವಿಮಲ್ ರಾಜ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದಂತೆ ಚಿತ್ರಿಸಲಾಗಿದ್ದು, ಇದಕ್ಕೆ ಅಕ್ಷಯ್ ಕುಮಾರ್, “ನೀವು ಹೇಳಿದ್ರಲ್ಲ 1988ರಲ್ಲಿ ನಿಮ್ಮ ಕಡೆ ಡಿಜಿಟಲ್ ಕ್ಯಾಮೆರಾ ಇತ್ತು ಅಂತ ಇದು ಹಾಗೆ” ಎಂದು ಉತ್ತರಿಸುವಂತೆ ಚಿತ್ರಿಸಲಾಗಿದೆ. ಇನ್ನೂ ವೇದಾತ್ ಮರಾಠೆ ವೀರ್ ದೌಡ್ಲೆ ಸಾತ್ ಚಿತ್ರವನ್ನು ಮಹೇಶ್ ಮಂಜ್ರೇಕರ್ ಅವರು ನಿರ್ದೇಶಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ