ನೂತನ ಲೋಕಾಯುಕ್ತರಾಗಿ ಬಿ.ಎಸ್‌.ಪಾಟೀಲ ಪ್ರಮಾಣವಚನ ಸ್ವೀಕಾರ - Mahanayaka

ನೂತನ ಲೋಕಾಯುಕ್ತರಾಗಿ ಬಿ.ಎಸ್‌.ಪಾಟೀಲ ಪ್ರಮಾಣವಚನ ಸ್ವೀಕಾರ

bs patil
15/06/2022

ಬೆಂಗಳೂರು: ರಾಜ್ಯದ ನೂತನ ಲೋಕಾಯುಕ್ತರಾಗಿ ಹಾಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.


Provided by

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋಟ್ ನೂತನ ಲೋಕಾಯುಕ್ತರಿಗೆ ಪ್ರಮಾಣವಚನ ಬೋಧಿಸಿದರು.

ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ  ಸಿಎಂ ಬೊಮ್ಮಾಯಿ ಹೂಗುಚ್ಛ ನೀಡಿ ನೂತನ ಲೋಕಾಯುಕ್ತರನ್ನು ಅಭಿನಂದಿಸಿದರು.

ಸಮಾರಂಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ,ಈಶ್ವರ್‌ ಖಂಡ್ರೆ, ಮಾಜಿ ಲೋಕಾಯುಕ್ತರಾದ ಎನ್.‌ ಸಂತೋಷ್‌ ಹೆಗ್ಡೆ, ಪಿ. ವಿಶ್ವನಾಥ್‌ ಶೆಟ್ಟಿ, ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಗಳು, ನ್ಯಾಯಾಂಗ ಇಲಾಖೆ ಅಧಿಕಾರಿಗಳು, ವಕೀಲರು ಮತ್ತು ನೂತನ ಲೋಕಾಯುಕ್ತರ ಕುಟುಂಬದ ಸದಸ್ಯರು  ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಹಂಸಲೇಖ ಮಹತ್ವದ ಹೇಳಿಕೆ!

ಯೋಗ ದಿನ: ಮೈಸೂರು ಮಹಾರಾಜರಿಗೆ ಆಹ್ವಾನ ಯಾಕಿಲ್ಲ? | ಪ್ರತಾಪ್ ಸಿಂಹ ಹೇಳಿದ್ದೇನು?

ರಸ್ತೆಗೆ ಉರುಳಿ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ:  ಬೈಕ್ ಸವಾರ ಸಾವು

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಬಗ್ಗೆ ಅವಹೇಳನ: ಯುವಕ ಅರೆಸ್ಟ್

ಜೂನ್ 20ರಂದು ಚಾಮುಂಡಿಬೆಟ್ಟಕ್ಕೆ ಪ್ರಧಾನಿ ಮೋದಿ ಭೇಟಿ

ಇತ್ತೀಚಿನ ಸುದ್ದಿ