ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋನ್ ನ್ನು ಹೊಡೆದುರುಳಿಸಿದ ಬಿಎಸ್ ‌ಎಫ್ ಅಧಿಕಾರಿಗಳು - Mahanayaka
3:27 AM Wednesday 5 - February 2025

ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋನ್ ನ್ನು ಹೊಡೆದುರುಳಿಸಿದ ಬಿಎಸ್ ‌ಎಫ್ ಅಧಿಕಾರಿಗಳು

pakistani drone
29/11/2022

ಚಂಡೀಗಡ: ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಡ್ರೋನ್ ವೊಂದನ್ನು ಬಿಎಸ್ ‌ಎಫ್ ಅಧಿಕಾರಿಗಳು ಹೊಡೆದುರುಳಿಸಿದ್ದಾರೆ.

ಚಹರ್‌ಪುರ್ ಗ್ರಾಮದ ಬಳಿ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿದ್ದ ಡ್ರೋನ್ ಅನ್ನು ಗಮನಿಸಿದ ಸೈನಿಕರು ಅದರ ಮೇಲೆ ಗುಂಡು ಹಾರಿಸಿ ನಾಶಪಡಿಸಿದ್ದಾರೆ.

ಡ್ರೋನ್‌ ನ ಶಬ್ಧ ಕೇಳಿ ಬಿಎಸ್ ‌ಎಫ್ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ. ಗುಂಡು ಶಂಕಿತ ಡ್ರೋನ್‌ ಗೆ ಬಡಿದು, ಅದು ನೆಲಕ್ಕೆ ಉರುಳಿದೆ. ತಕ್ಷಣ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದು, ಸಂಬಂಧಪಟ್ಟ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

2 ದಿನಗಳ ಹಿಂದೆಯೂ ಇಂತಹುದೇ ಘಟನೆ ನಡೆದಿತ್ತು. ಇದೀಗ ಮತ್ತೊಮ್ಮೆ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್ ಭಾರತದೊಳಗೆ ಪ್ರವೇಶಿಸಲು ಮುಂದಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ