ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದಿಂದ ‘ಬುದ್ಧ ಗುರು ಪೂರ್ಣಿಮೆ’ ಆಚರಣೆ - Mahanayaka
4:17 AM Wednesday 11 - December 2024

ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದಿಂದ ‘ಬುದ್ಧ ಗುರು ಪೂರ್ಣಿಮೆ’ ಆಚರಣೆ

budha guru purnime
14/07/2022

ಪುತ್ತೂರು: ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ(ರಿ) (BSI) ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ‘ಧಮ್ಮ ಚಕ್ರ ಪ್ರವರ್ತನ’ ದಿನವಾದ ಆಷಾಡ ಹುಣ್ಣಿಮೆಯನ್ನು  (ಗುರು ಪೂರ್ಣಿಮೆ) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆಚರಿಸಲಾಯಿತು.

ಸಮ್ಯಕ್ ಜ್ಞಾನವನ್ನು ಪಡೆದ ಭಗವಾನ್ ಬುದ್ಧರು ಧಮ್ಮವನ್ನು ಮೊಟ್ಟ ಮೊದಲ ಬಾರಿಗೆ ಸಾರನಾಥದಲ್ಲಿರುವ ಜಿಂಕೆವನದಲ್ಲಿ ( Deer park) ಐದು ಜನ ಭಿಕ್ಕುಗಳಿಗೆ ಬೋಧಿಸಿದ ಐತಿಹಾಸಿಕ ದಿನವೇ ಧಮ್ಮ ಚಕ್ರ ಪ್ರವರ್ತನ ದಿನ. ಇದು ಆಷಾಡ ಹುಣ್ಣಿಮೆಯಂದು ನಡೆದ ಘಟನೆಯಾಗಿದ್ದು ಭಗವಾನ್‌ ಬುದ್ಧರು ಧಮ್ಮ ಬೋಧನೆ ಮಾಡಿದ ಕುರುಹಾಗಿ ‘ಗುರು ಪೂರ್ಣಿಮೆ’ ಎಂದೂ ಈ ದಿನವನ್ನು ಸಂಭ್ರಮಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಬಿಎಸ್ ಐ(ರಿ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾದ ಆಯುಷ್ಮಾನ್ ದೇವಪ್ಪ ಕಾರೆಕ್ಕಾಡ್, ಉಪಾಧ್ಯಕ್ಷರಾದ ಆಯುಷ್ಮತಿ ಜಯಶ್ರೀ, ಖಚಾಂಚಿಗಳಾದ ಆಯುಷ್ಮಾನ್ ಮನೋಹರ್ ಪುತ್ತೂರು ಹಾಗೂ ಇನ್ನಿತರ ಬೌದ್ಧ ಉಪಾಸಕ, ಉಪಾಸಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಆಯುಷ್ಮಾನ್ ಭಾಸ್ಕರ್ ವಿಟ್ಲ ನೆರವೇರಿಸಿದರು. ಧಾರ್ಮಿಕ ಆಚರಣೆಯ ಭಾಗವಾಗಿ ಬುದ್ಧವಂದನೆ ಹಾಗೂ ತಿಸ್ಸರಣ, ಪಂಚಶೀಲಗಳನ್ನು ಉಪಸ್ಥಿತರಿದ್ದ ಬೌದ್ಧ ಉಪಾಸಕ, ಉಪಾಸಿಕರಿಗೆ ಧಮ್ಮಾಚಾರಿಯಾದ ಆಯುಷ್ಮಾನ್ ನಯನ್ ಕುಮಾರ್ ಇವರು ಬೋಧಿಸುವುದರ ಜೊತೆಗೆ ಮೈತ್ರಿ ಧ್ಯಾನದ ಕುರಿತಾಗಿ ಮಹತ್ವ ಹಾಗೂ ಅಭ್ಯಾಸ ನಡೆಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಹುಣ್ಣಿಮೆ ಉಪೋಸತದಲ್ಲಿ ಪಾಲ್ಗೊಂಡು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದರ ಮೂಲಕ ದಿನದ ವಿಶೇಷತೆಯ ಕುರಿತು ಮಾಹಿತಿ ಹಂಚಿಕೊಂಡರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ