BSNLನ ಅಂಗ ಸಂಸ್ಥೆಯನ್ನು ಮಾರಾಟ ಮಾಡಲು ಮುಂದಾದ ಕೇಂದ್ರ ಸರ್ಕಾರ
10/04/2021
ನವದೆಹಲಿ: ಬಿಎಸ್ ಎನ್ ಎಲ್ ನ ಅಂಗ ಸಂಸ್ಥೆಯಾಗಿರುವ ಬಿಟಿಸಿಎಲ್ (ಬಿಎಸ್‌ಎನ್‌ಎಲ್ ಟವರ್ ಕಂಪನಿ ಲಿಮಿಟೆಡ್)ನ್ನು ಖಾಸಗಿಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದರ ವಿರುದ್ಧ ಬಿಎಸ್ ಎನ್ ಎಲ್ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಪೆನಿಯ ಷೇರು ಮಾರಾಟ ಮಾಡುವುದು ಅಥವಾ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ನೌಕರರು ಆರೋಪಿಸುತ್ತಿದ್ದಾರೆ. ಬಿಎಸ್ ಎನ್ ಎಲ್ ನ ಟವರ್ , ಆಪ್ಟಿಕಲ್ ಫೈಬರ್ ಉಪಕರಣಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ನೌಕರರು ಆರೋಪಿಸಿದ್ದಾರೆ.
ಬಿಎಸ್ ಎನ್ ಎಲ್ 68,000 ಸಾವಿರಕ್ಕೂ ಅಧಿಕ ಮೊಬೈಲ್ ಟವರ್ ಗಳನ್ನು ಹೊಂದಿದೆ. ಈ ಪೈಕಿ 13,000 ಟವರ್ ಗಳನ್ನು ಖಾಸಗಿ ಮೊಬೈಲ್ ಸೇವಾ ಪೂರೈಕೆದಾರರಿಗೆ ಗುತ್ತಿಗೆ ನೀಡಲಾಗಿದೆ. ಈ ಪೈಕಿ 7,000 ಟವರ್ ಗಳನ್ನು ರಿಲಯನ್ಸ್ ಜಿಯೋ ಸ್ವಾಧೀನ ಪಡಿಸಿಕೊಂಡಿದೆ.