“BSP ಗೆದ್ದು ಬಂದ ನೆಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ” | ಬಿಎಸ್ ಪಿಯಿಂದ ಅಚ್ಚರಿಯ ಹೇಳಿಕೆ
ನವದೆಹಲಿ: ಮುಂದಿನ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ಗೆಲ್ಲಿಸಿದರೆ, ನಾವು ಗೆದ್ದು ಬಂದ ನೆಲದಲ್ಲಿ ಭವ್ಯವಾದ ಶ್ರೀರಾಮನ ಮಂದಿರವನ್ನು ನಿರ್ಮಿಸುತ್ತೇವೆ ಎಂದು ಬಿಎಸ್ ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಘೋಷಿಸಿದ್ದಾರೆ.
2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಎಸ್ ಪಿ ಆಯೋಜಿಸಿದ್ದ ಬ್ರಾಹ್ಮಣರ ಸಮ್ಮೇಳನವನ್ನುದ್ದೇಶಿಸಿ ಸತೀಶ್ ಚಂದ್ರ ಮಿಶ್ರಾ ಈ ಹೇಳಿಕೆ ನೀಡಿದ್ದು, ನಾವು ಎಲ್ಲಿ ಅಧಿಕಾರಕ್ಕೆ ಬರುತ್ತೇವೆಯೋ ಅಲ್ಲಿ ಶ್ರೀರಾಮನ ಮಂದಿರವನ್ನು ನಿರ್ಮಿಸುತ್ತೇವೆ ಎಂದು ಅವರು ಘೋಷಿಸಿದರು.
ಕಳೆದ ಚುನಾವಣೆ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ರಾಮ ಮಂದಿರದ ವಿಚಾರವನ್ನೇ ಬಳಸಿಕೊಂಡು ಗೆಲುವು ಸಾಧಿಸಿತ್ತು. 2022ರ ಚುನಾವಣೆಯಲ್ಲಿ ಬಿಎಸ್ ಪಿ ರಾಮಮಂದಿರದ ವಿಚಾರವನ್ನು ಎತ್ತಿಕೊಂಡಿದ್ದು, ಬಿಜೆಪಿಗೆ ತಿರುಗೇಟು ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ.
ಬ್ರಾಹ್ಮಣ್ಯವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ಬಿಎಸ್ ಪಿ ಇತ್ತೀಚೆಗೆ ಬ್ರಾಹ್ಮಣ್ಯದ ಬಗ್ಗೆ ಮೃಧು ಧೋರಣೆ ತಳೆದಿರುವುದು ಇನ್ನೊಂದೆಡೆ ಟೀಕೆಗಳಿಗೆ ಕಾರಣವಾಗಿದೆ. ಕಾನ್ಷೀರಾಮ್ ಅವರು ಹೇಳಿದ ರಾಜಕಾರಣ ಇದಲ್ಲ ಎಂಬ ಟೀಕೆಗಳ ನಡುವೆಯೇ 2022ರ ಚುನಾವಣೆಯ ನಡುವೆ ಬಿಎಸ್ ಪಿಯು ವಿರೋಧ ಪಕ್ಷಗಳ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ಆರಂಭಿಸಿದೆ ಎನ್ನುವ ಅಭಿಪ್ರಾಯಗಳು ಕೂಡ ಕೇಳಿ ಬಂದಿದೆ.
ಉತ್ತರ ಪ್ರದೇಶದಲ್ಲಿ ಬಿಎಸ್ ಪಿಯು ರಾಮಮಂದಿರದ ವಿಚಾರವನ್ನು ಕೆದಕಿರುವುದರಿಂದ ಬಿಜೆಪಿ ಹಾಗೂ ಬಿಎಸ್ ಪಿ ನಡುವೆ ಜಿದ್ದಾಜಿದ್ದಿನ ಹೋರಾಟ 2022ರ ಚುನಾವಣೆಯಲ್ಲಿ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ವಿಮರ್ಶೆಯ ಪ್ರಕಾರ ಸತೀಶ್ ಚಂದ್ರ ಮಿಶ್ರಾ ಅವರ ನೇತೃತ್ವದಲ್ಲಿ ಬ್ರಾಹ್ಮಣ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮಾಯಾವತಿ ತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನಷ್ಟು ಸುದ್ದಿಗಳು…
ಈಗ ಅವಕಾಶವಿದೆ, ದಲಿತ ಸಿಎಂ ಮಾಡಿ ತೋರಿಸಿ | ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಸವಾಲು
ದಲಿತ ಸಿಎಂ ವಿಚಾರ: ಸಿದ್ದರಾಮಯ್ಯಗೆ ಬಿಜೆಪಿಗೆ ಸವಾಲು ಹಾಕುವ ಯೋಗ್ಯತೆ ಇಲ್ಲ | ಕೆ.ಎಸ್.ಈಶ್ವರಪ್ಪ
ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ 16 ವರ್ಷದ ಬಾಲಕಿಯನ್ನು ಕೊಂದರು!
ಚೈತ್ರಾ ಕೋಟೂರ್ ಸನ್ಯಾಸಿನಿ ಆಗಿದ್ದು ನಿಜವೇ? | ಅಸಲಿಗೆ ನಡೆದದ್ದೇನು?