ಬಿಎಸ್ ಪಿ ಜೊತೆಗೆ ಮೈತ್ರಿಗೆ ಮುಂದಾದ ಅಕಾಲಿ ದಳ | ವಿವಾದಿತ ಕೃಷಿ ಕಾಯ್ದೆಗೆ ತಕ್ಕ ಶಾಸ್ತಿಗೆ ಪಣ - Mahanayaka
1:37 AM Wednesday 5 - February 2025

ಬಿಎಸ್ ಪಿ ಜೊತೆಗೆ ಮೈತ್ರಿಗೆ ಮುಂದಾದ ಅಕಾಲಿ ದಳ | ವಿವಾದಿತ ಕೃಷಿ ಕಾಯ್ದೆಗೆ ತಕ್ಕ ಶಾಸ್ತಿಗೆ ಪಣ

bsp shromani akalidala
12/06/2021

ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳ ಜಾರಿಯ ಬಳಿ ಬಿಜೆಪಿ ಜೊತೆಗಿನ ತನ್ನ ಮೈತ್ರಿಯನ್ನು ಕಡಿದುಕೊಂಡಿರುವ ಶಿರೋಮಣಿ ಅಕಾಲಿ ದಳ 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿಯ ಜೊತೆಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲು ಸಜ್ಜಾಗಿದೆ ಎಂದು ತಿಳಿದು ಬಂದಿದೆ.

ವಿವಾದಿತ ಕೃಷಿ ಕಾಯ್ದೆ ಹಿನ್ನೆಲೆಯಲ್ಲಿ ಅಕಾಲಿದಳ  ಸೆಪ್ಟಂಬರ್ ನಲ್ಲಿ ಬಿಜೆಪಿಯ ಮೈತ್ರಿಯನ್ನು ಕಡಿದುಕೊಂಡಿತ್ತು.  ಪಂಜಾಬ್ ನಲ್ಲಿ ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಾರ್ಟಿಯನ್ನು ಹೊರತುಪಡಿಸಿ, ಉಳಿದ ಪಕ್ಷದ ಜೊತೆಗೆ ಮೂತ್ರಿಗೆ ಸಿದ್ಧ ಎಂದು ಪಕ್ಷದ ಮುಖಂಡ ಸುಖ್ ಬೀರ್ ಸಿಂಗ್ ಬಾದಲ್ ಘೋಷಿಸಿದ್ದರು.

1996ರ ಲೋಕಸಭಾ ಚುನಾವಣೆಯಲ್ಲಿ ಅಕಾಲಿ ದಳ ಹಾಗೂ ಬಿಎಸ್ ಪಿ ಮೈತ್ರಿ ಪಂಜಾಬ್ ನ 13 ಸ್ಥಾನಗಳಲ್ಲಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಎಸ್ ಪಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಅಕಾಲಿದಳಕ್ಕೆ 10 ಸ್ಥಾನಗಳಲ್ಲಿ ಗೆಲುವು ತಂದುಕೊಟ್ಟಿತ್ತು.

ಸದ್ಯ ಇದೇ ಲೆಕ್ಕಚಾರದಲ್ಲಿರುವ ಶಿರೋಮಣಿ ಅಕಾಲಿ ದಳ ಮುಂದಿನ ಚುನಾವಣೆಯಲ್ಲಿ ಬಿಎಸ್ ಪಿಯ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಈ ಮೂಲಕ ಕಾಂಗ್ರೆಸ್, ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಪಂಜಾಬ್ ನಲ್ಲಿ ಸೋಲುಣಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ