‘BTV’ ಅಮೂಲ್ಯ ಸುದ್ದಿ ವಿಚಾರ: “ನಿಮ್ಮ ಪತ್ರಿಕೆ ಮದ್ವೆ ಸುದ್ದಿ ಮಾಡಿಲ್ವಾ?” | “ಒಂದು ಇಮೋಜಿಗೆ ಇಷ್ಟು ಉರ್ಕೊಂಡ್ರೆ ಹೇಗೆ?” | ಪರ ವಿರೋಧ ಚರ್ಚೆ!
ಕನ್ನಡ ಖ್ಯಾತ ನಟಿ ಅಮೂಲ್ಯ ಅವರು ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿಯನ್ನು ಕನ್ನಡ ಸುದ್ದಿವಾಹಿನಿ ‘BTV’ ವಿಶೇಷ ಸುದ್ದಿಯಾಗಿ ವಿವರಿಸುವ ಸಂದರ್ಭದಲ್ಲಿ ಬಳಕೆ ಮಾಡಿರುವ ಪದ ಇದೀಗ ಟ್ರೋಲಿಗರ ಬಾಯಿಗೆ ತುತ್ತಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ವಿಚಾರವನ್ನು ಒಪ್ಪಿಕೊಳ್ಳುವ ಬದಲು, ಇಂದು ಬಿಟಿವಿ ಟ್ರೋಲ್ ಮಾಡುವವರನ್ನು ಮತ್ತು ಈ ಬಗ್ಗೆ ಕಮೆಂಟ್ ಮಾಡುವವರನ್ನು ತರಾಟೆಗೆತ್ತಿಕೊಂಡಿದ್ದು, ಇದರಿಂದಾಗಿ ಟ್ರೋಲ್ ಯುದ್ಧ ಮತ್ತೆ ಮುಂದುವರಿಯುವಂತಾಗಿದೆ.
ಬಿಟಿವಿ ನಿರೂಪಕಿ ಟ್ರೋಲ್ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ‘ಬಿಟ್ಟಿ ಇಂಟರ್ ನೆಟ್ ಇದೆ ಎಂದು ಬೇಕಾಬಿಟ್ಟಿ ಕಮೆಂಟ್ಸ್ ಮಾಡ್ತೀರಾ?’ ಎನ್ನುತ್ತಾ, ಕನ್ನಡ ದಿನಪತ್ರಿಕೆಯೊಂದರ ಸಂಪಾದಕರು ಈ ಟ್ವೀಟ್ ಮಾಡಿರುವ ತುಣುಕನ್ನು ಪ್ರದರ್ಶಿಸಿ, ಹಿರಿಯ ಸಂಪಾದಕರೇ ನೀವು ಕೂಡ ಅವ್ರ ಟೀಂ ಸೇರಿಬಿಟ್ರಾ? ಆ ಸಂಪಾದಕರ ಪತ್ರಿಕೆಯಲ್ಲಿ ಸ್ಟಾರ್ ಗಳ ಮದ್ವೆ ಸುದ್ದಿ ಮಾಡಿಲ್ವಾ? ಎಂದು ಪ್ರಶ್ನೆ ಕೇಳಿದ್ದಾರೆ.
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ವಿಶ್ವೇಶ್ವರ್ ಭಟ್ ಟ್ವೀಟ್ ಮಾಡಿದ್ದು, “ಒಂದು ಇಮೋಜಿಗೆ ಇಷ್ಟು ಉರ್ಕೊಂಡ್ರೆ ಹೇಗೆ ಸ್ವಾಮಿ?” ಎಂದು ಪ್ರಶ್ನಿಸಿ, ಬಿಟಿವಿಯ ಪ್ರಶ್ನೆಗಳ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.
ಎಲ್ಲ ಮಾಧ್ಯಮಗಳಲ್ಲಿಯೂ ಸ್ಟಾರ್ ನಟ, ನಟಿಯರ ಕುರಿತ ಸುದ್ದಿಗಳು ವಿಶೇಷ ಟೈಟಲ್ ಗಳಲ್ಲಿ ಪ್ರಕಟವಾಗುವುದು ಸಹಜ ಆದರೆ, ಕೆಲವೊಂದು ಬಾರಿ, ಲೆಕ್ಕಕ್ಕಿಂತ ಅಧಿಕ ಅನ್ನಿಸುವ ಟೈಟಲ್ ಗಳು ವಿವಾದಕ್ಕೀಡಾಗುತ್ತದೆ. ತಪ್ಪುಗಳು, ಗೊಂದಲಗಳಾದ ವೇಳೆ ಮಾಧ್ಯಮಗಳು ಪ್ರಬುದ್ಧತೆಯಿಂದ ಸಂಯಮದಿಂದ ವರ್ತಿಸಬೇಕಾಗುತ್ತದೆ ಎನ್ನುವ ಅಭಿಪ್ರಾಯಗಳು ಸದ್ಯ ಕೇಳಿ ಬಂದಿದೆ.
ಒಂದು ಇಮೋಜಿ(🤦♂️)ಗೆ ಇಷ್ಟು
ಉರ್ಕೊಂಡ್ರೆ ಹೇಗೆ ಸ್ವಾಮಿ?! pic.twitter.com/gRq6KfHr0S— Vishweshwar Bhat (@VishweshwarBhat) December 3, 2021
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪಬ್ ನಲ್ಲಿ ಕಿರಿಕ್: ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿಗೆ ಬಿಯರ್ ಬಾಟಲಿಯಿಂದ ಹಲ್ಲೆ
ಒಮಿಕ್ರಾನ್ ಡೆಲ್ಟಾಕ್ಕಿಂತ ಅಪಾಯಕಾರಿ ಅಲ್ಲ: ಈ ವೈರಸ್ ನ್ನು ಕಂಡು ಹಿಡಿದ ಡಾಕ್ಟರ್ ಆ್ಯಂಜಲಿಕ್ ಹೇಳಿದ್ದೇನು?
ಶಾಕಿಂಗ್ ನ್ಯೂಸ್: ಕರ್ನಾಟಕದಲ್ಲಿ 2 ಒಮಿಕ್ರಾನ್ ಪ್ರಕರಣಗಳು ಪತ್ತೆ
ಪುತ್ರನ ಮದುವೆಯ ಸಂಭ್ರಮದಲ್ಲಿದ್ದ ದಂಪತಿ ರಸ್ತೆ ಅಪಘಾತದಲ್ಲಿ ದಾರುಣ ಸಾವು!
ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್
ಒಕ್ಕಲಿಗರ ಸಂಘದ ಚುನಾವಣೆ: ಆಮಿಷ ಒಡ್ಡಿ ಮತಬೇಡುವವರನ್ನು ಬೆಂಬಲಿಸಬೇಡಿ | ಯುವ ಮುಖಂಡ ಸಚಿನ್ ಸರಗೂರು