ಬುಡಕಟ್ಟು ಮಹಿಳೆಯರ ಜೊತೆ ಪ್ರಿಯಾಂಕಾ ಗಾಂಧಿ ನೃತ್ಯ: ನಾಚಿಕೆಯಾಗುವುದಿಲ್ಲವೇ? ಎಂದು ಕೇಳಿದ ಬಿಜೆಪಿ!
ಪಣಜಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗೋವಾದಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರೊಂದಿಗೆ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಹಾಡಿಗೆ ಹೆಜ್ಜೆ ಹಾಕಿದ್ದು, ಈ ಮೂಲಕ ಗಮನ ಸೆಳೆದಿದ್ದಾರೆ.
ಬುಡಕಟ್ಟು ಜನಾಂಗಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ ಗಾಂಧಿ, ಅಲ್ಲಿನ ಮಹಿಳೆಯರು ತಮ್ಮೊಂದಿಗೆ ನೃತ್ಯ ಮಾಡುವಂತೆ ಮನವಿ ಮಾಡಿದಾಗ ಆರಂಭದಲ್ಲಿ ನಿರಾಕರಿಸಿದ್ದು, ಆದರೆ ಅವರ ಒತ್ತಾಯಕ್ಕೆ ಮಣಿದು ಹೆಜ್ಜೆ ಹಾಕಿದ್ದರು.
ಈ ಘಟನೆ ಇದೀಗ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದ್ದು, ತಮಿಳುನಾಡಿನಲ್ಲಿ ಯೋಧರು ಹುತಾತ್ಮರಾಗಿ ದೇಶ ಶೋಕದಲ್ಲಿರುವಾಗ ಕಾಂಗ್ರೆಸ್ ನಾಯಕಿ ಬುಡಕಟ್ಟು ಜನಾಂಗದ ಜೊತೆಗೆ ನೃತ್ಯ ಮಾಡಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವೀಯ ವಾಗ್ದಾಳಿ ನಡೆದಿದ್ದಾರೆ.
26/11 ದುರಂತ ಸಂಭವಿಸಿದಾಗ ರಾಹುಲ್ ಗಾಂಧಿ ಬೆಳಗ್ಗಿನ ಜಾವದ ವರೆಗೂ ಪಾರ್ಟಿ ಮಾಡುತ್ತಿದ್ದರು. ಈಗ ಹೆಲಿಕಾಫ್ಟರ್ ಪತನಗೊಂಡು 12 ಜನರು ಸಾವನ್ನಪ್ಪಿರುವಾಗ ಪ್ರಿಯಾಂಕಾ ಗೋವಾದಲ್ಲಿ ನೃತ್ಯ ಮಾಡುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡು ಇನ್ನೇನಿದೆ ಎಂದು ಅವರು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿರುವ ಸಿನಿಮಾಗಳ ಪಟ್ಟಿ ಬಿಡುಗಡೆ: ‘ಜೈ ಭೀಮ್’ಗೆ ಮೊದಲ ಸ್ಥಾನ
ಮಗುವನ್ನು ಹಿಡಿದುಕೊಂಡಿದ್ದ ವ್ಯಕ್ತಿಯ ಮೇಲೆ ಲಾಠಿ ಚಾರ್ಜ್: ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಠಿಣ ಕ್ರಮ
ಸಿಎಂ ಸ್ಥಾನದಿಂದ ಇಳಿಯುತ್ತಾರಾ ಬಸವರಾಜ್ ಬೊಮ್ಮಾಯಿ? | ಬಲವಾಗಿ ಕೇಳಿ ಬರುತ್ತಿರುವ ಚರ್ಚೆಗಳೇನು ಗೊತ್ತಾ?
ಕೇರಳದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ: ಕೋಳಿ, ಬಾತುಕೋಳಿ, ಮೊಟ್ಟೆಗಳನ್ನು ನಾಶಪಡಿಸಲು ಆದೇಶ
1 ಲೀಟರ್ ಕತ್ತೆಯ ಹಾಲಿಗೆ 10 ಸಾವಿರ ರೂಪಾಯಿ! | ಒಂದು ಚಮಚ ಕತ್ತೆಯ ಹಾಲಿಗೆ 100 ರೂಪಾಯಿ!