ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಲಾರಿಗೆ ಕಟ್ಟಿ ಎಳೆದೊಯ್ದು ಭೀಕರ ಹತ್ಯೆ: ಪೊಲೀಸರ ಬಳಿ ಸುಳ್ಳು ಕಥೆ ಕಟ್ಟಿದ ಆರೋಪಿಗಳು - Mahanayaka
8:11 PM Wednesday 11 - December 2024

ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಲಾರಿಗೆ ಕಟ್ಟಿ ಎಳೆದೊಯ್ದು ಭೀಕರ ಹತ್ಯೆ: ಪೊಲೀಸರ ಬಳಿ ಸುಳ್ಳು ಕಥೆ ಕಟ್ಟಿದ ಆರೋಪಿಗಳು

madhyapradesh
29/08/2021

ನೀಮುಚ್(ಮಧ್ಯಪ್ರದೇಶ):  ಬುಡಕಟ್ಟು ಸಮುದಾಯದ ವ್ಯಕ್ತಿಯೋರ್ವನನ್ನು ಕಳ್ಳತನದ ಆರೋಪ ಹೊರಿಸಿ ಲಾರಿಯ ಹಿಂಭಾಗಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿದ್ದು, ಯುವಕ ತನ್ನನ್ನು ಕೊಲ್ಲದಂತೆ ಪರಿಪರಿಯಾಗಿ ಬೇಡಿಕೊಂಡರೂ, ದುಷ್ಕರ್ಮಿಗಳು ಕನಿಕರ ತೋರದೇ ಹಿಂಸಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

45 ವರ್ಷ ವಯಸ್ಸಿನ ಕಣಿಯಾ ಭಿಲ್ ಅವರನ್ನು ನೀಮುಚ್ ಜಿಲ್ಲೆಯ ಜೆಟ್ಲಿಯಾ ಗ್ರಾಮದಲ್ಲಿ ಹಾಡಹಗಲೇ ಗುಂಪೊಂದು ಭೀಕರ ದಾಳಿ ನಡೆಸುವ ಮೂಲಕ ಹತ್ಯೆ ಮಾಡಿದೆ. ಸರಕು ಸಾಗಾಟದ ಲಾರಿಯ ಹಿಂಭಾಗಕ್ಕೆ ವ್ಯಕ್ತಿಯನ್ನು ಕಟ್ಟಿ ಹಲವಾರು ಮೀಟರ್ ಗಳ ವರೆಗೆ ರಸ್ತೆಯಲ್ಲಿ ಎಳೆದೊಯ್ದು, ಬಳಿಕ ಯುವಕನ ಮುಖಕ್ಕೆ ಕಾಲಿನಿಂದ ಬಲವಾಗಿ ಒದ್ದಿದ್ದಾರೆ. ಅಲ್ಲಿಯವರೆಗೆ ದುಷ್ಕರ್ಮಿಗಳು ವಿಡಿಯೋ ಮಾಡಿದ್ದಾರೆ. ಆ ಬಳಿಕ ಅವರು ಘೋರ ಚಿತ್ರ ಹಿಂಸೆ ನೀಡಿರುವ ಸಾಧ್ಯತೆಗಳಿವೆ.

ತೀವ್ರ ಚಿತ್ರಹಿಂಸೆ ನಡೆಸಿದ ಬಳಿಕ ದುಷ್ಕರ್ಮಿಗಳು ಪೊಲೀಸರಿಗೆ ಕರೆ ಮಾಡಿ,  ಕಳ್ಳನನ್ನು ಹಿಡಿದಿದ್ದೇವೆ ಎಂದು ಹೇಳಿದ್ದಾರೆ. ಈ ವೇಳೆ ಸ್ಥಳಕ್ಕೆ ನೀಮುಚ್ ಎಎಸ್ ಪಿ ಸುಂದರ್ ಸಿಂಗ್ ಕಾನೇಶ್ ಆಗಮಿಸಿದ್ದು, ಈ ವೇಳೆ ಸಂತ್ರಸ್ತ ತೀವ್ರವಾಗಿ ಗಾಯಗೊಂಡಿದ್ದ ಎಂದು ಹೇಳಲಾಗಿದೆ. ಆತನಿಗೆ ತುರ್ತಾಗಿ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎನ್ನುವುದು ತಿಳಿಯುತ್ತಿದ್ದಂತೆ ಪೊಲೀಸರು ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ಕಥೆ ಹೆಣೆದ ದುಷ್ಕರ್ಮಿಗಳು!

ಮಾಹಿತಿಗಳ ಪ್ರಕಾರ ಕಣಿಯಾ ಭಿಲ್ ಪ್ರಯಾಣಿಸುತ್ತಿದ್ದ ಬೈಕ್  ಇಲ್ಲಿನ ಗುರ್ಜರ್ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಡಿಕ್ಕಿ ಹೊಡೆದಿತ್ತು. ಕಣಿಯಾ ಭಿಲ್ ಬುಡಕಟ್ಟು ಸಮುದಾಯದ ವ್ಯಕ್ತಿಯಾಗಿರುವುದರಿಂದಾಗಿ ಆತನ ಮೇಲೆ ಜಾತಿ ಮನಸ್ಥಿತಿಗಳ ವ್ಯಕ್ತಿಗಳು ದಾಳಿ ನಡೆಸಿದ್ದಾರೆ.  ಬಳಿಕ ಆತನನ್ನು ಸರಕು ಸಾಗಾಟದ ಲಾರಿಗೆ ಕಟ್ಟಿ ಹಾಕಿ ರಸ್ತೆಯಲ್ಲಿ ಎಳೆದಿದ್ದಾರೆ.  ವಿಡಿಯೋ ಚಿತ್ರೀಕರಣ ಮಾಡಿ, ಕಳ್ಳನನ್ನು ಹಿಡಿದಿರುವುದಾಗಿ ಬಿಂಬಿಸಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

8 ಮಂದಿ ಅರೆಸ್ಟ್!

ಗ್ರಾಮದ ಸರ್ಪಂಚ್ ಪತಿ ಈ ಕೃತ್ಯದಲ್ಲಿ ನೇರವಾಗಿ ಭಾಗವಹಿಸಿದ್ದು, ಈತನ ಮಾರ್ಗದರ್ಶನದಲ್ಲಿಯೇ ಈ ಎಲ್ಲ ಶಿಕ್ಷೆಗಳನ್ನು ನೀಡಲಾಗಿದೆ ಎನ್ನಲಾಗಿದೆ. ಇದೀಗ ಈ ಬಗ್ಗೆ ಪ್ರಕರಣ ದಾಖಳಿಸಿಕೊಂಡಿರುವ ಪೊಲೀಸರು, ಗ್ರಾಮದ ಸರ್ಪಂಚ್ ಸೇರಿದಂತೆ 8 ಮಂದಿಯನ್ನು ಅರೆಸ್ಟ್ ಮಾಡಿದ್ದು, ಇನ್ನಷ್ಟು ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆ | ತಾಲಿಬಾನ್ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ

ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಹಿರಿಯ ನಟ ಜಗ್ಗೇಶ್

ದೇಶದಿಂದಲೇ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ | ತಾಕತ್ ಇದ್ದರೆ ಟಿಎಂಸಿಯನ್ನು ತಡೆಯಿರಿ | ಅಭಿಷೇಕ್ ಬ್ಯಾನರ್ಜಿ ಸವಾಲು

126 ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ವಿಮಾನದ ಪೈಲಟ್ ಗೆ ಹೃದಯಾಘಾತ: ಮುಂದೆ ನಡೆದದ್ದೇನು?

ನೀಚ ಕೃತ್ಯ: ಶಾಲೆಯ ಕಿಟಕಿಗೆ ಬಿಯರ್ ಬಾಟಲಿ ಎಸೆದ ಕಿಡಿಗೇಡಿಗಳು

ಮೈಸೂರು: ಸಾಮೂಹಿಕ ಅತ್ಯಾಚಾರದ ಆರೋಪಿಗಳು ಇನ್ನಷ್ಟು ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ!

ಇತ್ತೀಚಿನ ಸುದ್ದಿ