ಬೌದ್ಧ ಅನುಯಾಯಿ, ಅಂಬೇಡ್ಕರವಾದಿ, SBI ನಿವೃತ್ತ ಅಧಿಕಾರಿ ಮಹಾಬಲ ಎಂ. ನಿಧನ

01/10/2023
ಬೆಳ್ವಾಯಿ: ಸಾಮಾಜಿಕ ಪರಿವರ್ತನಾ ಚಳುವಳಿಯ ಕೊಂಡಿ, ಅಂಬೇಡ್ಕರವಾದಿ, ವಿಚಾರವಾದಿ, ಬೌದ್ಧ ಅನುಯಾಯಿಯಾದ SBI ನಿವೃತ್ತ ಅಧಿಕಾರಿಯಾದ ಮಹಾ ಉಪಾಸಕ ಮಹಾಬಲ ಎಂ. ಅವರು ಸುಗತಿ ಹೊಂದಿದ್ದಾರೆ.
66 ವರ್ಷ ವಯಸ್ಸಿನ ಮಹಾಬಲ ಅವರು, ಉಸಿರಾಟದ ಹಾಗೂ ಕಾಲು ನೋವಿನ ತೊಂದರೆಯಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ರಾತ್ರಿ 11 ಗಂಟೆಯ ಸುಮಾರಿಗೆ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಬೌದ್ಧ ಸಂಪ್ರದಾಯದಂತೆ ಬೆಳ್ವಾಯಿ ಪಡುಮಾರ್ನಾಡು, ಸಿದ್ಧಾರ್ಥನಗರ ಮನೆಯ ಜಾಗದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.