ಮಣ್ಣಿನಡಿಯಲ್ಲಿ ಸಮಾಧಿ ಮಾಡಲಾಗಿದ್ದ ಪುರಾತನ  ಬೌದ್ಧ ವಿಹಾರ ಪತ್ತೆ - Mahanayaka
4:15 AM Thursday 21 - November 2024

ಮಣ್ಣಿನಡಿಯಲ್ಲಿ ಸಮಾಧಿ ಮಾಡಲಾಗಿದ್ದ ಪುರಾತನ  ಬೌದ್ಧ ವಿಹಾರ ಪತ್ತೆ

02/03/2021

ಜಾರ್ಖಂಡ್ : ಸುಮಾರು 900 ವರ್ಷಗಳಿಗೂ ಅಧಿಕ ಹಳೆಯ ಬೌದ್ಧ ವಿಹಾರವೊಂದು ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಪತ್ತೆಯಾಗಿದ್ದು, ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್‌ ಐ) ಈ ಬೌದ್ಧ ವಿಹಾರವನ್ನು ಪತ್ತೆ ಮಾಡಿದೆ.

ಎಎಸ್ ಐನ ಪಾಟ್ನಾ ಶಾಖೆಯ ತಂಡವು ಜುಲ್ಜುಲ್ ಪಹಾರ್ ಬಳಿಯ ಬುರ್ಹಾನಿ ಗ್ರಾಮದಲ್ಲಿ ದೇವತೆ ತಾರಾ ಮತ್ತು ಬುದ್ಧನ 10 ಕಲ್ಲಿನ ಪ್ರತಿಮೆಗಳನ್ನು ಪತ್ತೆ ಮಾಡಿದ್ದು, ಈ ವಿಹಾರವನ್ನು ಮಣ್ಣಿನಡಿಯಲ್ಲಿ ಸಮಾಧಿ ಮಾಡಲಾಗಿತ್ತು ಎಂದು ಶಂಕಿಸಲಾಗಿದೆ.

ಈ ಬೌದ್ಧ ವಿಹಾರವು ಸಾರನಾಥದಿಂದ 10 ಕಿ.ಮೀ. ದೂರದಲ್ಲಿದ್ದು, ವಾರಣಸಿಯ ಹಳೆಯ ಮಾರ್ಗದಲ್ಲಿದೆ. ಹೀಗಾಗಿ ಇದೇ ಪ್ರದೇಶದಲ್ಲಿ ಭಗವಾನ್ ಗೌತಮ ಬುದ್ಧರು ತಮ್ಮ ಮೊದಲ ಧರ್ಮೋಪದೇಶ ನೀಡಿರುವ ಕಾರಣ ಬೌದ್ಧ ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲು ಈ ಸಂಶೋಧನೆ ಹಾಗೂ ಇಲ್ಲಿ ಪತ್ತೆಯಾಗಿರುವ ವಿಹಾರ ಬುದ್ಧರ ಮೂರ್ತಿಗಳು ಸಹಾಯ ಮಾಡಲಿವೆ ಎಂದು ಪುರತತ್ವಜ್ಞರು ತಿಳಿಸಿದ್ದಾರೆ.

ಉತ್ಕನನದ ಸಂದರ್ಭದಲ್ಲಿ ನಾಲ್ಕು-ಐದು ಪದಗಳ ಲಿಪಿ ಕೂಡ ಪತ್ತೆಯಾಗಿದೆ ಎಂದು ಪುರತತ್ವಜ್ಞರು ಹೇಳಿದ್ದಾರೆ.  ಇದನ್ನು ಡೀಕೋಡಿಂಗ್ ಮಾಡಲು ಮೈಸೂರಿಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.  ಇಲ್ಲಿ ಪತ್ತೆಯಾಗಿರುವ ಲಿಪಿ ನಾಗ್ರಿ ಲಿಪಿ ಆಗಿರಬಹುದು ಎಂದು ಪುರತತ್ವಜ್ಞರು ಹೇಳಿದ್ದಾರೆ.




buddhist monastery found

whatsapp

ಇತ್ತೀಚಿನ ಸುದ್ದಿ