ಕೇಂದ್ರ ಬಜೆಟ್ 2022: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ; ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ - Mahanayaka
3:47 AM Wednesday 11 - December 2024

ಕೇಂದ್ರ ಬಜೆಟ್ 2022: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ; ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

nirmala
01/02/2022

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 4ನೇ ಬಾರಿ ಕೇಂದ್ರದ ಬಜೆಟ್‌ನ್ನು ಮಂಡಿಸಿದ್ದು, ಈ ಬಾರಿಯೂ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದಾಯ ತೆರಿಗೆ ವ್ಯವಸ್ಥೆ ಯಥಾಸ್ಥಿತಿ ಇರಲಿದೆ ಎಂದು ತಿಳಿಸಿದ್ದಾರೆ.

ರಾಜ್ಯ, ಕೇಂದ್ರ ಸರ್ಕಾರಿ ನೌಕರರ ಟಿಡಿಎಸ್ 10ರಿಂದ 14ಕ್ಕೆ ಏರಿಕೆ ಮಾಡಲಾಗುವುದು. ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಕಾಲ ಬಡ್ಡಿ ರಹಿತ ಸಾಲ ನೀಡಲಾಗುವುದು. ತೆರಿಗೆ ಪಾವತಿಯಲ್ಲದ ತಪ್ಪುಗಳ ಸರಿಪಡಿಸಲು ಅವಕಾಶ ನೀಡಲಾಗುವುದು. ತಪ್ಪು ಸರಿಪಡಿಸಲು 2 ವರ್ಷಗಳ ಕಾಲ ಅವಕಾಶ. ಸಹಕಾರಿ ಸಂಘಗಳ ಮೇಲಿನ ಸರ್ ಚಾರ್ಜ್ ಶೇ. 12ರಿಂದ ಶೇ. 7ಕ್ಕೆ ಇಳಿಕೆ ಮಾಡಲಾಗುವುದು ಎಂದು ತಿಳಿಸಿದರು.

ಆರ್‌ಬಿಐನಿಂದಲೇ ಡಿಜಿಟಲ್ ಕರೆನ್ಸಿ ಆರಂಭ ಮಾಡಲಾಗುವುದು . ಎಸ್ಸಿ, ಎಸ್ಟಿ ರೈತರಿಗೆ ಆರ್ಥಿಕ ನೆರವು, ಎಸ್ಸಿ, ಎಸ್ಟಿ ರೈತರಿಗೆ ಸಹಕಾರ. ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ ರೂಪಿಸಲಾಗುವುದು. 2022ರಲ್ಲೇ ದೇಶದಲ್ಲಿ 5 ಜಿ ಸೇವೆ ಆರಂಭವಾಗಲಿದೆ. ಪ್ರತಿ ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬಲ್ ಕೇಬಲ್ ಆರಂಭಾಗಲಿದೆ. ಒನ್ ನೇಷನ್ ಒನ್ ರಿಜಿಸ್ಟ್ರೇಷನ್ (ಒಂದು ದೇಶ, ಒಂದು ನೋಂದಣಿ) ವ್ಯವಸ್ಥೆ ಸ್ಥಾಪನೆ. ಆಸ್ತಿ ನೋಂದಣಿಗೆ ಡಿಜಿಟಲ್ ವ್ಯವಸ್ಥೆ ಜಾರಿ,ಆಸ್ತಿ ನೋಂದಣಿ ಇನ್ಮುಂದೆ ಡಿಜಿಟಲೀಕರಣ ಮಾಡಲಾಗುವುದು ಎಂದು ಎಂದರು.

75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು. ಗ್ರಾಮ ಸೌಕರ್ಯ ಅಭಿವೃದ್ಧಿ ಆರ್ಥಿಕ ನೆರವು. ಎಲ್ಲಾ ಫೋಸ್ಟ್ ಆಫೀಸ್‌ಗಳಲ್ಲೂ ಬ್ಯಾಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇ-ಪಾಸ್ ಪೋರ್ಟ್ 2023ರಲ್ಲಿ ಜಾರಿಗೊಳಿಸಲಾಗುವುದು. ಹೊಸ ತಂತ್ರಜ್ಞಾನದೊಂದಿಗೆ ಇಪಾಸ್ ಪೋರ್ಟ್ ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ