ಮುಂದಿನ 25 ವರ್ಷಗಳ ದೂರದೃಷ್ಟಿಯ ಬಜೆಟ್‌: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ - Mahanayaka
8:18 AM Saturday 21 - September 2024

ಮುಂದಿನ 25 ವರ್ಷಗಳ ದೂರದೃಷ್ಟಿಯ ಬಜೆಟ್‌: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

budget
01/02/2022

ನವದೆಹಲಿ: ಮುಂದಿನ 25 ವರ್ಷ ವರ್ಷಗಳ ದೂರದೃಷ್ಟಿಯನ್ನು ಈ ಬಜೆಟ್‌ ಹೊಂದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಲೋಕಸಭೆಯಲ್ಲಿ ಬಜೆಟ್‌ ಭಾಷಣದ ವೇಳೆ ಮಾತನಾಡಿದ ಅವರು, ಭಾರತ ಈಗ 75 ವರ್ಷಗಳ ಸ್ವಾತಂತ್ರತ್ಯ ಸಂಭ್ರಮದಲ್ಲಿದೆ. ಈ ಅಮೃತ ಕಾಲದದಲ್ಲಿ ಮುಂದೆ 25 ವರ್ಷಗಳಲ್ಲಿ ಭಾರತ ಆರ್ಥಿಕತೆಯ ನೀಲನಕ್ಷೆಯನ್ನು ದೂರದೃಷ್ಟಿ ಈ ಬಜೆಟ್‌ನಲ್ಲಿದೆ ಎಂದು ತಿಳಿಸಿದರು.

ನಾವು ಓಮಿಕ್ರಾನ್ ಅಲೆಯ ಮಧ್ಯೆ ಇದ್ದೇವೆ, ನಮ್ಮ ವ್ಯಾಕ್ಸಿನೇಷನ್ ಅಭಿಯಾನದ ವೇಗವು ಹೆಚ್ಚು ಸಹಾಯ ಮಾಡಿದೆ. ‘ಸಬ್ಕಾ ಪ್ರಯಾಸ್’, ನಾವು ಬಲವಾದ ಬೆಳವಣಿಗೆಯೊಂದಿಗೆ ಮುಂದುವರಿಯುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದರು.


Provided by

ಮುಂದಿನ 3 ವರ್ಷಗಳಲ್ಲಿ ಉತ್ತಮ ದಕ್ಷತೆಯೊಂದಿಗೆ 400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳನ್ನು ತರಲಾಗುವುದು. ಪ್ರಧಾನಮಂತ್ರಿ ಗತಿಶಕ್ತಿ ಅಡಿಯಲ್ಲಿ 100 ಕಾರ್ಗೋ ಟರ್ಮಿನಲ್‌ಗಳನ್ನು ಮುಂದಿನ 3 ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಮೆಟ್ರೋ ವ್ಯವಸ್ಥೆಗಳನ್ನು ನಿರ್ಮಿಸಲು ನವೀನ ಮಾರ್ಗಗಳ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ