ಬುದ್ಧ ಪೂರ್ಣಿಮೆ: ನೇಪಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ
ಕಠ್ಮಂಡು: ಬುದ್ಧನ 2566ನೇ ಜನ್ಮದಿನಾಚರಣೆ (ಬುದ್ಧ ಪೂರ್ಣಿಮೆ) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇಪಾಳ ಭೇಟಿ ಆರಂಭವಾಗಿದೆ. ನೇಪಾಳದ ಬುದ್ಧನ ಜನ್ಮಸ್ಥಳ ಲುಂಬಿನಿಗೆ ಆಗಮಿಸಿದ ಪ್ರಧಾನಿ ಮಾಯಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಉತ್ತರ ಪ್ರದೇಶದ ಕುಶಿನಗರದಿಂದ ಹೆಲಿಕಾಪ್ಟರ್ ಮೂಲಕ ಲುಂಬಿನಿಗೆ ಬಂದಿಲಿದ ಮೋದಿ ಅವರನ್ನು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದುಬೆ ಅವರು ಬರಮಾಡಿಕೊಂಡರು. ಕೇಂದ್ರ ಸರ್ಕಾರ 100 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಬೌದ್ಧ ಆಶ್ರಮಕ್ಕೆ ಉಭಯ ನಾಯಕರು ಜಂಟಿಯಾಗಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿರುವ ಅಂತರರಾಷ್ಟ್ರೀಯ ಬುದ್ಧಿಸ್ಟ್ ಕಾನ್ಫಡರೇಷನ್ ಮೂಲಕ ಭಾರತವು ಸಹಾಯ ಮಾಡುತ್ತಿದೆ. ಲುಂಬಿನಿಯಲ್ಲಿರುವ ಅಶೋಕ ಸ್ತಂಭ ಮತ್ತು ಬೋಧಿ ವೃಕ್ಷಕ್ಕೆ ಮೋದಿ ಭೇಟಿ ನೀಡಲಿದ್ದಾರೆ. 2019 ರಲ್ಲಿ ಭಾರತದ ಎರಡನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನರೇಂದ್ರ ಮೋದಿ ನೇಪಾಳಕ್ಕೆ ಇದು ಮೊದಲ ಭೇಟಿಯಾಗಿದೆ.
ಈ ಮಧ್ಯೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ನಾಲ್ಕು ದಿನಗಳ ಭೇಟಿಗಾಗಿ ಜಮೈಕಾಕ್ಕೆ ಆಗಮಿಸಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ ಕಿಂಗ್ ಸ್ಟನ್ ನ ನಾರ್ಮನ್ ಮ್ಯಾನ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಬಂದಿಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಗಳನ್ನು ಸಾಕಲು 36 ವರ್ಷಗಳಿಂದ ಪುರುಷ ವೇಷ ಧರಿಸಿ ಬದುಕುತ್ತಿರುವ ಮಹಿಳೆ!
ಬಾಲಕಿಗೆ ಡಿಕ್ಕಿ ಹೊಡೆದ ಪಿಕಪ್ ಚಾಲಕನನ್ನು ಸಜೀವ ದಹನ ಮಾಡಿದ ಗ್ರಾಮಸ್ಥರು
ಶಾಸಕ ಜಿ.ಟಿ. ದೇವೇಗೌಡರ ಮೊಮ್ಮಗಳು ನಿಧನ: ಕಂಬನಿ ಮಿಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ.ಶಿ.
ನಿಂಬೆ ಹಣ್ಣಿಗೆ ಕೆ.ಜಿಗೆ 300: ಕೇಂದ್ರ ಸರ್ಕಾರವನ್ನು ತರಾಟೆಗೆತ್ತಿಕೊಂಡ ಸಚಿನ್ ಪೈಲಟ್