ಬುದ್ಧಿವಾದ ಹೇಳಿದ್ದಕ್ಕೆ ತಮ್ಮನನ್ನು ಹತ್ಯೆ ಮಾಡಿ, ಬೆಡ್ ಶೀಟ್ ನಲ್ಲಿ ಮುಚ್ಚಿ ಪರಾರಿಯಾದ ಅಣ್ಣ! - Mahanayaka
5:56 PM Wednesday 11 - December 2024

ಬುದ್ಧಿವಾದ ಹೇಳಿದ್ದಕ್ಕೆ ತಮ್ಮನನ್ನು ಹತ್ಯೆ ಮಾಡಿ, ಬೆಡ್ ಶೀಟ್ ನಲ್ಲಿ ಮುಚ್ಚಿ ಪರಾರಿಯಾದ ಅಣ್ಣ!

krishna arjuna mestha
12/07/2021

ಕಾರವಾರ:  ಮನೆಯಲ್ಲಿ ಕಾಲಹರಣ ಮಾಡದೇ ಕೆಲಸ ಮಾಡಲು ಹೋಗು ಎಂದು ಬುದ್ಧಿವಾದ ಹೇಳಿದ ತಮ್ಮನನ್ನು ಅಣ್ಣ ಕೊಚ್ಚಿ ಕೊಲೆ ಮಾಡಿದ ಘಟನೆ ಹೊನ್ನಾವರ ಪಟ್ಟಣದ ಚರ್ಚ್ ರೋಡ್ ಬಳಿಯಲ್ಲಿ  ನಡೆದಿದ್ದು, ಭಾನುವಾರ ರಾತ್ರಿ ಈ ಘಟನೆ ಬೆಳಕಿಗೆ ಬಂದಿದೆ.

23 ವರ್ಷ ವಯಸ್ಸಿನ ಅರ್ಜುನ ಶಂಕರ ಮೇಸ್ತ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಈತನ ಹಿರಿಯ ಅಣ್ಣ ಕೃಷ್ಣ ಮೇಸ್ತ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಅಣ್ಣ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಾನೆ ಎನ್ನುವ ಕಾರಣಕ್ಕೆ ಇವರಿಬ್ಬರ ನಡುವೆ ಆಗಾಗ ಜಗಳವಾಗುತ್ತಲೇ ಇತ್ತು ಎಂದು ಹೇಳಲಾಗಿದೆ.

ಭಾನುವಾರ ಕೂಡ ಇಬ್ಬರ ನಡುವೆ ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಅಣ್ಣ ಕೃಷ್ಣ ಮೇಸ್ತ ತಮ್ಮನನ್ನು ಹತ್ಯೆ ಮಾಡಿ ಬೆಡ್ ಶೀಟ್ ನಿಂದ ಮುಚ್ಚಿ ಮನೆಗೆ ಬೀಗ ಹಾಗಿ ನಾಪತ್ತೆಯಾಗಿದ್ದ. ಸಂಜೆ ವೇಳೆಗೆ ಹೊಟೇಲ್ ಕೆಲಸ ಮುಗಿಸಿ ಮನೆಗೆ ತಾಯಿ ಬಂದಾಗ ಮನೆಗೆ ಬೀಗ ಹಾಕಲಾಗಿದ್ದು, ಎಷ್ಟೇ ಕೂಗಿದರೂ ಯಾರೂ ಬೀಗ ತೆರೆಯದಿದ್ದಾಗ ಬೀಗ ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

ಇನ್ನೂ ಘಟನೆ ಸಂಬಂಧ ತಾಯಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕೃಷ್ಣ ಮೇಸ್ತನನ್ನು ಬೆಳಗಾಗುವುದರೊಳಗೆ ಪತ್ತೆ ಮಾಡಿ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು:

ಸೊಸೆಯನ್ನು ಚೈನ್ ನಲ್ಲಿ ಕಟ್ಟಿ ಹಾಕಿ ನಡು ರಸ್ತೆಯಲ್ಲಿ ಮಾವನಿಂದಲೇ ಹೀನ ಕೃತ್ಯ!

ಟ್ರ್ಯಾಕ್ಟರ್ ಹರಿದು ಬಾಲಕ ಸಾವು; ಮನನೊಂದ ಚಾಲಕ ಆತ್ಮಹತ್ಯೆಗೆ ಶರಣು

ಅಪ್ರಾಪ್ತೆಯ ಜೊತೆ ದೈಹಿಕ ಸಂಪರ್ಕ, ಮದುವೆ: ಆರೋಪಿಗೆ 10 ವರ್ಷ ಜೈಲು, 10 ಸಾವಿರ ದಂಡ

ಸಹೋದರಿಯ ಮೇಲೆ ಅತ್ಯಾಚಾರ ನಡೆದ ಬಗ್ಗೆ ದೂರು ದಾಖಲಿಸಿದ್ದಕ್ಕೆ ಯುವಕನ ಮರ್ಮಾಂಗ ಕತ್ತರಿಸಿದ ಆರೋಪಿಗಳು

ಇತ್ತೀಚಿನ ಸುದ್ದಿ