ಬುದ್ಧಿಮಾಂದ್ಯನ ಮೇಲೆ ಮನಬಂದಂತೆ ಥಳಿಸಿದ ಪಿಎಸ್‍ ಐ - Mahanayaka
6:01 AM Thursday 12 - December 2024

ಬುದ್ಧಿಮಾಂದ್ಯನ ಮೇಲೆ ಮನಬಂದಂತೆ ಥಳಿಸಿದ ಪಿಎಸ್‍ ಐ

shivamogga
05/03/2022

ಶಿವಮೊಗ್ಗ: ಜಿಲ್ಲೆಯ ಹೊಸನಗರ ಠಾಣೆ ಪಿಎಸ್‍ ಐ ಹಾಗೂ ಕಾನ್ಸ್‌ ಟೇಬಲ್ ಸೇರಿ ಬುದ್ಧಿಮಾಂದ್ಯನ ಮೇಲೆ ನಡು ರಸ್ತೆಯಲ್ಲೇ ಮನಬಂದಂತೆ ಥಳಿಸಿರುವ ಘಟನೆ ಬಗ್ಗೆ ವರದಿಯಾಗಿದೆ.

ಜಿಲ್ಲೆಯ ಹೊಸನಗರ ಠಾಣೆ ಪಿಎಸ್‍ ಐ ರಾಜೇಂದ್ರ ನಾಯ್ಕ್ ಹಾಗೂ‌ ಕಾನ್ಸ್‌ ಟೇಬಲ್ ಇಬ್ಬರು ಬುದ್ಧಿಮಾಂದ್ಯ ಜಟ್ಟಪ್ಪ ಎಂಬಾತನ ಮೇಲೆ ಮನಬಂದಂತೆ ಥಳಿಸುವ ಮೂಲಕ ಅಮಾನೀಯವಾಗಿ ವರ್ತಿಸಿದ್ದಾರೆ.

ಜಟ್ಟಪ್ಪ ರಸ್ತೆಯಲ್ಲಿ ಹೋಗುತ್ತಿರುವವರಿಗೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸುತ್ತಿದ್ದು, ಇದರಿಂದ ರೋಸಿ ಹೋದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಹಾಗಾಗಿ ಜಟ್ಟಪ್ಪನನ್ನು ವಶಕ್ಕೆ ಪಡೆಯಲು ತೆರಳಿದ್ದ ಪಿಎಸ್‍ಐ ರಾಜೇಂದ್ರ ನಾಯ್ಕ್ ಅವರಿಗೆ ಜಟ್ಟಪ್ಪ ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದ್ದ. ಜಟ್ಟಪ್ಪನ ಕೃತ್ಯಕ್ಕೆ ಕೋಪಗೊಂಡ ಪಿಎಸ್‍ಐ ಹಾಗೂ ಕಾನ್ಸ್‌ ಟೇಬಲ್, ಬುದ್ಧಿಮಾಂದ್ಯ ಎಂಬುದನ್ನು ಮರೆತು ಹಲ್ಲೆ ನಡೆಸಿದ್ದಾರೆ.

ಬುದ್ಧಿಮಾಂದ್ಯನ ಮೇಲೆ ಪಿಎಸ್‍ ಐ ಹಾಗೂ ಕಾನ್ಸ್‌ ಟೇಬಲ್ ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಿಎಸ್‍ ಐ ಹಾಗೂ ಕಾನ್ಸ್‌ ಟೇಬಲ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದರೋಡೆ ಯತ್ನ: ಮೂವರು ಆರೋಪಿಗಳ ಬಂಧನ

ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಗೆ ನೀಡಿದ್ದ ಗನ್‌ ಮ್ಯಾನ್ ಹಿಂಪಡೆದ ಸರಕಾರ

ಮೀನು ವ್ಯಾಪಾರಿ ಮೇಲೆ ತಲವಾರಿನಿಂದ ದಾಳಿ: 2 ಲಕ್ಷ ರೂ. ನಗದು ದರೋಡೆ

ಉಕ್ರೇನ್‌ ನಲ್ಲಿ ರಷ್ಯಾದಿಂದ ತಾತ್ಕಾಲಿಕ ಕದನ ವಿರಾಮ ಘೋಷಣೆ

ಕಾಲೇಜಿನಿಂದ ಡಿಬಾರ್: 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

 

ಇತ್ತೀಚಿನ ಸುದ್ದಿ