ರೊಚ್ಚಿಗೆದ್ದು ಯುವಕನನ್ನು ತಿವಿದು ಕೊಂದ ಕಸಾಯಿಖಾನೆಗೆ ತಂದಿದ್ದ ಎಮ್ಮೆ!

ಕಸಾಯಿಖಾನೆಗೆಂದು ತಂದ ಎಮ್ಮೆಯೊಂದು ರೊಚ್ಚಿಗೆದ್ದು ಯುವಕನನ್ನು ತಿವಿದು ಕೊಂದ ಘಟನೆ ಕಾಸರಗೋಡಿನ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಮೃತನನ್ನು ಮೊಗ್ರಾಲ್ ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಮೂಲದ ಸಾದಿಕ್ ಎಂದು ಗುರುತಿಸಲಾಗಿದೆ. ಮೊಗ್ರಾಲ್ ಪುತ್ತೂರಿನ ಕಸಾಯಿಖಾನೆಗೆ ತರಲಾಗಿದ್ದ ಎಮ್ಮೆಯನ್ನು ವಾಹನದಿಂದ ಇಳಿಸುವಾಗ ಹಗ್ಗ ತುಂಡಾಗಿ ಎಮ್ಮೆ ತಪ್ಪಿಸಿಕೊಂಡಿದೆ.
ಓಡುತ್ತಿರುವ ಎಮ್ಮೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಸಾದಿಕ್ ಗೆ ಎಮ್ಮೆ ಕೊಂಬಿನಿಂದ ಹೊಟ್ಟೆ ಭಾಗಕ್ಕೆ ತಿವಿದಿದೆ. ಗಂಭೀರ ಗಾಯಗೊಂಡ ಯುವಕನನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.
ಇನ್ನು ಈ ಕೋಣ ಮೊಗ್ರಾಲ್ ಪೇಟೆಯಲ್ಲಿ ಸುಮಾರು 4 ಕಿ. ಮೀ. ಓಡಾಡಿ ಭಾrI ನಷ್ಟ ಉಂಟುಮಾಡಿದೆ. ಓರ್ವ ಬಾಲಕನನ್ನು ಗಾಯಗೊಳಿಸಿದೆ. ಬೇಕರಿಗೆ ನುಗ್ಗಿ ದಾಂಧಲೆ ಮಾಡಿದೆ. ಸ್ಕೂಟರ್ ಸವಾರನನ್ನು ನೆಲಕ್ಕುರುಳಿಸಿದೆ.
ಕೋಣವನ್ನು ಹಿಡಿಯಲು ಪ್ರಯತ್ನಿಸಿದ ಕೆಲವು ಮಂದಿಗೆ ಗಾಯಗಳಾಗಿವೆ. ಕೊನೆಗೆ ಪೊಲೀಸರು ಮತ್ತು ಅಗ್ನಿಶಾಮಕ ನೆರವಿನಲ್ಲಿ ಕೋಣವನ್ನು ಹಿಡಿದು ಕಟ್ಟಿ ಹಾಕಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw