ಬುರ್ಖಾ ಧರಿಸದೇ ಓಡಾಡುತ್ತಿದ್ದ ಮಹಿಳೆಯರನ್ನು ಸುಟ್ಟುಕೊಂದ ತಾಲಿಬಾನಿಗಳು!
ಕಾಬುಲ್: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಬಹಳಷ್ಟು ಅಫ್ಘಾನಿಸ್ತಾನ ಪ್ರಜೆಗಳನ್ನು ಸುಟ್ಟುಕೊಂದಿದ್ದಾರೆ ಎನ್ನುವ ವಿಚಾರಗಳು ಇದೀಗ ಒಂದೊಂದಾಗಿ ತಿಳಿದು ಬರುತ್ತಿದೆ. ಘಟನೆಯ ಭೀಕರತೆಯನ್ನು ಅನುಭವಿಸಿದ ಅಫ್ಘಾನಿಸ್ತಾನದ ಮಹಿಳೆಯೊಬ್ಬರು ಈ ವಿಚಾರವನ್ನು ವಿವರಿಸಿದ್ದಾರೆ.
ತನ್ನ ಕಚೇರಿಯಲ್ಲಿದ್ದ ವೇಳೆ, ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಸುತ್ತುವರಿದಿದ್ದಾರೆ ಎನ್ನುವುದು ತಿಳಿಯಿತು. ನಮ್ಮ ಕಚೇರಿಯನ್ನೂ ಸುತ್ತುವರೆದಿರುವುದು ತಿಳಿಯಿತು. ಬುರ್ಖಾ ಧರಿಸದೇ ಓಡಾಡುತ್ತಿರುವ ಮಹಿಳೆಯರನ್ನು ತಾಲಿಬಾನಿಗಳು ಸ್ವಲ್ಪವೂ ಕರುಣೆ ಇಲ್ಲದೇ ಸುಟ್ಟು ಹಾಕುತ್ತಿದ್ದರು. ನಾನು ಕೂಡ ಬುರ್ಖಾ ಧರಿಸಿರಲಿಲ್ಲ. ಸಹೋದ್ಯೋಗಿಗಳ ಬಳಿಯೂ ಹೆಚ್ಚುವರಿ ಬುರ್ಖಾ ಇರಲಿಲ್ಲ. ಏನು ಮಾಡಬೇಕು ಎನ್ನುವುದ ತೋಚದೇ ಕೊನೆಗೆ ಬೇರೊಂದು ಮಾರ್ಗದಲ್ಲಿ ಹೇಗೋ ಹೋಗಿ ಮನೆಗೆ ತಲುಪಿದೆ. ಈ ವೇಳೆ ಮನೆಯಲ್ಲಿ ನನ್ನ ಅಕ್ಕ ಬುರ್ಖಾ ತಂದಿದ್ದಳು. ಇದರಿಂದಾಗಿ ನಾನು ಬದುಕಿದೆ ಎಂದು ಆಕೆ ಹೇಳಿದ್ದಾಳೆ.
ತಾಲಿಬಾನಿಗಳ ಹಿಡಿತಕ್ಕೆ ಸಿಕ್ಕಿದವರು ತಮ್ಮ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದ್ದಾರೆ. ಪುರುಷರು ಕಡ್ಡಾಯವಾಗಿ ಗಡ್ಡ ಬಿಡಬೇಕು. ಮಹಿಳೆಯರು ಕಡ್ಡಾಯವಾಗಿ ಬುರ್ಖಾ ಧರಿಸಬೇಕು ಮತ್ತು ಮನೆಯಿಂದ ಹೊರಗೆ ಕೆಲಸಕ್ಕೆ ಹೋಗುವಂತಿಲ್ಲ.
ಅಫ್ಘಾನಿಸ್ತಾನದಲ್ಲಿ ಈ ಹಿಂದೆ ಬಹಳಷ್ಟು ಸ್ವಾತಂತ್ರ್ಯಗಳಿದ್ದವು. ಆದರೆ ಇವೆಲ್ಲವನ್ನು ಇದೀಗ ಇಲ್ಲಿನ ಪ್ರಜೆಗಳು ಕಳೆದುಕೊಂಡಿದ್ದಾರೆ. ಮಹಿಳೆಯರು ಉನ್ನತ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದರೂ, ಇನ್ನು ಮುಂದೆ ಯಾವುದೇ ಕೆಲಸಕ್ಕೆ ಹೋಗುವಂತಿಲ್ಲ. ಇಂತಹ ದುಸ್ಥಿತಿಯನ್ನು ಅನುಭವಿಸಲಾಗದೇ ನಿನ್ನೆ ಅಷ್ಟೊಂದು ಪ್ರಮಾಣದಲ್ಲಿ ಜನರು ದೇಶವನ್ನೇ ಬಿಟ್ಟು ಓಡಲು ಮುಂದಾಗಿದ್ದರು. ಸದ್ಯಕ್ಕೆ ಅಫ್ಘಾನಿಸ್ತಾನದ ಜನತೆಗೆ ನೆಮ್ಮದಿ ಸಿಗುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.
ಇನ್ನಷ್ಟು ಸುದ್ದಿಗಳು…
ತಾಲಿಬಾನ್ ಉಗ್ರರ ಕೈಸೇರಿತು ಅಮೆರಿಕದ ಆಧುನಿಕ ಯುದ್ಧೋಪಕರಣಗಳು | ವಿಶ್ವಕ್ಕೆ ಸವಾಲು ಹಾಕುತ್ತಾರಾ ಉಗ್ರರು?
4 ಕಾರು, 1 ಹೆಲಿಕಾಫ್ಟರ್ ನಲ್ಲಿ ಹಣ ತುಂಬಿಸಿಕೊಂಡು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಪರಾರಿ
ಉಗ್ರರ ಅಟ್ಟಹಾಸಕ್ಕೆ ನಲುಗಿದ ಅಫ್ಘಾನಿಸ್ತಾನ | ಪ್ರಾಣ ಉಳಿಸಿಕೊಳ್ಳಲು ವಿಮಾನದ ಟಯರ್ ಏರಿದವರ ದುರಂತ ಅಂತ್ಯ
ಧ್ವಜಾರೋಹಣದ ವೇಳೆ ರಾಷ್ಟ್ರಗೀತೆ ಮರೆತ ಸಂಸದ, ಕೊನೆಗೆ ಮಾಡಿದ್ದೇನು? | ವಿಡಿಯೋ ವೈರಲ್